alex Certify
ಕನ್ನಡ ದುನಿಯಾ       Mobile App
       

Kannada Duniya

ಈತನ ಹೊಟ್ಟೆಯಲ್ಲಿತ್ತು ಕೊಕೇನ್ ತುಂಬಿದ ನಿರೋಧ್ !

Kokain-201100286139

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಾಕಷ್ಟು ವಿದೇಶಿಗರು ನೆಲೆಸಿದ್ದು, ಅದರಲ್ಲಿ ಹಲವರು ಸಮಾಜಘಾತುಕ ಕಾರ್ಯಗಳಲ್ಲಿ ನಿರತರಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಈ ನಡುವೆಯೇ ನೈಜೀರಿಯಾದ ಪ್ರಜೆಯೊಬ್ಬ ತನ್ನ ಹೊಟ್ಟೆಯಲ್ಲಿ ಬರೋಬ್ಬರಿ 5 ಕೋಟಿ ಮೌಲ್ಯದ ಸುಮಾರು 1 ಕೆ.ಜಿ.ಯಷ್ಟು ಕೊಕೇನ್ ಸಾಗಿಸುವಾಗ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸೆರೆ ಸಿಕ್ಕಿದ್ದಾನೆ.

ಹೌದು. ಇಮ್ಯಾನ್ಯುಯಲ್‌ ಎಂಬ 28 ವರ್ಷದ ನೈಜೀರಿಯಾದ ಪ್ರಜೆಯೊಬ್ಬ ಕೊಕೇನ್ ಗುಳಿಗೆಗಳು ತುಂಬಿದ್ದ 70 ನಿರೋಧ್‌ ಗಳನ್ನು ನುಂಗಿ ಫೆ.8 ರಂದು ಅಬುದಾಬಿಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳಿಗ್ಗೆ 7.30ರ ಸುಮಾರಿಗೆ ಬಂದಿಳಿದಿದ್ದ. ಈ ಕುರಿತು ದೊರೆತ ಖಚಿತ ಮಾಹಿತಿ ಮೇರೆಗೆ ಮಾದಕ ವಸ್ತು ನಿಯಂತ್ರಣ ದಳದ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಆತನನ್ನು ವಶಕ್ಕೆ ಪಡೆದು ತಪಾಸಣೆಗೆ ಒಳಪಡಿಸಿದ್ದು, ಈ ಸಮಯದಲ್ಲಿ ಹೊಟ್ಟೆಯೊಳಗೆ ಕೊಕೇನ್ ಗುಳಿಗೆಗಳು ಇರುವುದು ಪತ್ತೆಯಾಗಿದೆ.

ಈಗಾಗಲೇ ಈತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆ ತರಲಾಗಿದ್ದು ಮಲ ವಿಸರ್ಜನೆಯ ಮೂಲಕ ಆತನ ಹೊಟ್ಟೆಯಲ್ಲಿದ್ದ ಕೊಕೇನ್ ತುಂಬಿದ್ದ ನಿರೋಧ್ ಗಳನ್ನು ಹೊರತೆಗೆಯಲಾಗಿದೆ. ಆತನ ಆರೋಗ್ಯ ಸದ್ಯ ಸುಧಾರಿಸಿದ್ದು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...