alex Certify
ಕನ್ನಡ ದುನಿಯಾ       Mobile App
       

Kannada Duniya

ಜೋಡುಪಾಳ್ಯ, ಮದೆನಾಡಿನಲ್ಲಿ ಮತ್ತೆ ಭೂಕುಸಿತದ ಎಚ್ಚರಿಕೆ

ಮಡಿಕೇರಿ: ಭೀಕರ ಜಲಪ್ರಳಯಕ್ಕೆ ನಲುಗಿದ್ದ ಕೊಡಗು ಜಿಲ್ಲೆಯಲ್ಲಿ ವರುಣನ ಆರ್ಭಟ ಕಡಿಮೆಯಾಗಿದ್ದು, ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಹಲವು ಗ್ರಾಮಗಳ ಜನರು ತಮ್ಮ ಮನೆಗಳ ಬಳಿ ಬಂದಿದ್ದು, ಸಂಪೂರ್ಣ ಊರಿಗೆ ಊರೇ ನೆಲಕಚ್ಚಿರುವುದನ್ನು ಕಂಡು ಕಣ್ಣೀರಿಡುತ್ತಿದ್ದಾರೆ.

ಇಂದಿನಿಂದ ಕೊಡಗಿನ 61 ಶಾಲೆಗಳನ್ನು ಹೊರತುಪಡಿಸಿ, ಉಳಿದೆಲ್ಲ ಶಾಲಾ-ಕಾಲೇಜುಗಳು ಪುನರಾರಂಭವಾಗಿದೆ. ಭೂಕುಸಿತ ಪ್ರದೇಶದಲ್ಲಿ ಪರಿಹಾರ ಕಾರ್ಯಾಚರಣೆ ಭರದಿಂದ ಸಾಗಿದೆ. ನಾಪತ್ತೆ ಆಗಿರುವವರನ್ನು ಪತ್ತೆ ಮಾಡಲಾಗುತ್ತಿದೆ.

ಇನ್ನು ಕೊಡಗಿನಲ್ಲಿ ಸಂಭವಿಸಿರುವ ಪ್ರಕೃತಿ ವಿಕೋಪದ ಕುರಿತು ಅಧ್ಯಯನ ನಡೆಸಿರುವ ಭೂ ವಿಜ್ಞಾನಿಗಳು, ಗುಡ್ಡ ಪ್ರದೇಶಗಳಲ್ಲಿ ನೀರು ಇಂಗಿ ಸ್ಫೋಟದ ಮೂಲಕ ಹೊರಬಂದಿದೆ. ಪ್ರಕೃತಿ ಮಾತ್ರವಲ್ಲ ಮಾನವ ಕೃತ್ಯಗಳು ಕೂಡಾ ಇದಕ್ಕೆ ಮುಖ್ಯ ಕಾರಣ ಎಂದಿದ್ದಾರೆ. ಅಲ್ಲದೇ ಮದೆನಾಡು, ಜೋಡುಪಾಲ, ಅರೆಕಲ್ ವಾಸಕ್ಕೆ ಯೋಗ್ಯವಾಗಿಲ್ಲ. ಈ ಪ್ರದೇಶಗಳಲ್ಲಿ ಮತ್ತೆ ಭೂಕುಸಿತವಾಗುವ ಸಾಧ್ಯತೆಗಳಿವೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...