alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಹ ಸಂತ್ರಸ್ತರ ಸಂಕಷ್ಟಕ್ಕೆ ಮಿಡಿದ ಖೈದಿಗಳ ಹೃದಯ

ಬೆಂಗಳೂರು: ಭೀಕರ ಮಳೆ, ಭೂಕುಸಿತ, ಪ್ರವಾಹಕ್ಕೀಡಾಗಿ ಜರ್ಜರಿತಗೊಂಡಿರುವ ಕೊಡಗಿನ ಸಂತ್ರಸ್ತರ ಸಂಕಷ್ಟಕ್ಕೆ ಬಳ್ಳಾರಿ ಕೇಂದ್ರ ಕಾರಾಗೃಹ ಖೈದಿಗಳ ಹೃದಯವೂ ಮಿಡಿದಿದ್ದು, ಮಾಂಸಾಹಾರ ತೊರೆದು ಕೈಲಾದ ದೇಣಿಗೆ ಸಂಗ್ರಹಿಸಿ ನೀಡಲು ನಿರ್ಧರಿಸಿದ್ದಾರೆ.

ಶನಿವಾರ ಮತ್ತು ಭಾನುವಾರ ಜೈಲಿನಲ್ಲಿ ನೀಡುವ ಮಾಂಸಹಾರ ಊಟವನ್ನು ತ್ಯಜಿಸಿ ಅದರ ಹಣವನ್ನು ನೆರೆ ಸಂತ್ರಸ್ಥರಿಗೆ ರವಾನಿಸಲು ಖೈದಿಗಳು ಮುಂದಾಗಿದ್ದಾರೆ.

ಒಟ್ಟು ನಾಲ್ಕು ವಾರಗಳ ಕಾಲ ಮಾಂಸಹಾರವನ್ನು ತ್ಯಜಿಸಲು ನಿರ್ಧರಿಸಿರುವ ಖೈದಿಗಳು, ಇದರಿಂದ ಉಳಿತಾಯವಾಗುವ 2-3 ಲಕ್ಷ ರೂ. ಹಣವನ್ನು ಕೊಡಗು ಸಂತ್ರಸ್ತರಿಗೆ ನೀಡುವಂತೆ ಜೈಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಈ ಮೂಲಕ ಅಪರಾಧಿಗಳಾಗಿ ಜೈಲಿನಲ್ಲಿ ಬಂಧಿಯಾಗಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳು ಕೂಡ ನೆರೆ ಸಂತ್ರಸ್ತರ ಸಂಕಟಕ್ಕೆ ಮರುಗಿ, ಸಹಾಯಹಸ್ತ ನೀಡುತ್ತಿರುವುದು ಶ್ಲಾಘನೀಯ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...