alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಹ ಸಂತ್ರಸ್ತರಿಗೆ ಶಿವಮೊಗ್ಗ ಯುವಕರ ವಿಭಿನ್ನ ಸೇವೆ

ಮಡಿಕೇರಿ: ಭೀಕರ ಜಲಪ್ರಳಯಕ್ಕೆ ತುತ್ತಾಗಿ ಸಂತ್ರಸ್ತರಾಗಿರುವ ಕೊಡಗಿನ ಜನತೆಯ ಸಹಾಯಕ್ಕಾಗಿ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಹಲವರು ಹಲವು ರೀತಿಯಲ್ಲಿ, ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಈ ನಡುವೆ ಶಿವಮೊಗ್ಗದ ಯುವಕರ ತಂಡವೊಂದು ನೆರೆ ಸಂತ್ರಸ್ತರಿಗೆ ಉಚಿತ ಹೇರ್ ಕಟ್, ಶೇವಿಂಗ್ ಮಾಡುವ ಮೂಲಕ ತಮ್ಮ ಸಹಾಯ ಹಸ್ತ ಚಾಚಿದ್ದಾರೆ.

ಸಂತ್ರಸ್ತರಿಗೆ ತಾವೂ ಏನಾದರೂ ಸಹಾಯ ಮಾಡಬೇಕು ಎಂದು ನಿರ್ಧರಿಸಿದ ಶಿವಮೊಗ್ಗದ 7 ಜನರ ಯುವಕರ ಗುಂಪು, ತಮ್ಮ ಸಲೂನ್ ಗಳಿಗೆ ರಜೆ ಹಾಕಿ ಕ್ಷೌರಕ್ಕೆ ಬೇಕಾದ ಸಾಮಗ್ರಿಗಳ ಜತೆಗೆ ಕೊಡಗಿಗೆ ತೆರಳಿದ್ದಾರೆ. ನಾಗರಾಜ್‌, ಪವನ್‌, ಪ್ರಕಾಶ್‌, ಮಧು, ರಘು, ಸಂತೋಷ್‌ ಹಾಗೂ ಮಧು ಎಂಬ 7 ಜನರಿರುವ ಯುವಕರ ಗುಂಪು ಮೈತ್ರಿ ಕನ್ವೆನ್ಷನ್ ಹಾಲ್‌, ಓಂಕಾರ ಸದನ, ಬ್ರಾಹ್ಮಣರ ಸಭಾ ಭವನ, ಜನರಲ್‌ ತಿಮ್ಮಯ್ಯ ಶಾಲೆ ಹೀಗೆ ಜಿಲ್ಲೆಯಲ್ಲಿರುವ ಎಲ್ಲ ನಿರಾಶ್ರಿತರ ಶಿಬಿರಕ್ಕೂ ಭೇಟಿ ನೀಡಿ, ಅಲ್ಲಿರುವ ಜಾಗದಲ್ಲೇ ಸಂತ್ರಸ್ತರ ಕಟಿಂಗ್‌, ಶೇವಿಂಗ್‌ ಮಾಡಿ ವಾಪಾಸ್‌ ಆಗಲು ನಿರ್ಧರಿಸಿದ್ದಾರೆ.

ನಾವೆಲ್ಲರೂ ಆರ್ಥಿಕವಾಗಿ ತುಂಬಾ ಹಿಂದುಳಿದಿದ್ದು, ದೊಡ್ಡ ಪ್ರಮಾಣದಲ್ಲಿ ಸಹಾಯ ಮಾಡಲು ನಮ್ಮಿಂದ ಸಾಧ್ಯವಿಲ್ಲ. ಹೀಗಾಗಿ ಕೊಡಗಿನ ಸಂತ್ರಸ್ತರಿಗೆ ಏನಾದರೂ ಸಹಾಯ ಮಾಡಬೇಕೆಂಬ ಆಸೆಯಿಂದ ಒಟ್ಟಾಗಿ ಈ ತೀರ್ಮಾನಕ್ಕೆ ಬಂದೆವು. ನಿರಾಶಿತ್ರರು ಕೇಂದ್ರದಿಂದ ಹೊರಗೆ ಹೋಗಿ ಕಟಿಂಗ್‌ ಮತ್ತು ಶೇವಿಂಗ್‌ ಮಾಡಿಸಿಕೊಳ್ಳುವುದು ಕಷ್ಟ. ಹೀಗಾಗಿ ನಾವು ಅವರಿಗೆ ನೆರವಾಗುತ್ತೇವೆ. ಸಾಧ್ಯವಾದಷ್ಟು ಸಹಾಯ ಮಾಡಿ ತೆರಳುತ್ತೇವೆ ಎಂಬುದು ಯುವಕರ ಮಾತು. ತಾವೇ ಆರ್ಥಿಕವಾಗಿ ಸಂಕಷ್ಟದಲ್ಲಿದ್ದರೂ ಪ್ರವಾಹ ಪೀಡಿತರ ಸಂಕಷ್ಟಕ್ಕೆ ಮಿಡಿದು ತಮ್ಮ ಕೈಲಾದ ಸಹಾಯವನ್ನು ಮಾಡಲು ಮುಂದಾಗಿರುವ ಈ ಯುವಕರ ಕಾರ್ಯ ನಿಜಕ್ಕೂ ಎಲ್ಲರಿಗೂ ಮಾದರಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...