alex Certify
ಕನ್ನಡ ದುನಿಯಾ       Mobile App
       

Kannada Duniya

ಹೈಕೋರ್ಟ್ ಬಳಿ ಯುವತಿಯ ಕಿಕಿ ಡ್ಯಾನ್ಸ್

ಬೆಂಗಳೂರು: ಅಪಾಯಕಾರಿ ಕಿಕಿ ಡ್ಯಾನ್ಸ್ ಕುರಿತು ಎಷ್ಟೇ ಜಾಗೃತಿ ಮೂಡಿಸಿ ಅದನ್ನು ತಡೆಯಲು ಪೊಲೀಸರು ಯತ್ನಿಸಿದರೂ ಪೊಲೀಸರ ಕಣ್ತಪ್ಪಿಸಿ ಕಿಕಿ ಡ್ಯಾನ್ಸ್ ಮಾಡಿ ವಿಡಿಯೋಗಳನ್ನು ಅಪ್ ಲೋಡ್ ಮಾಡುತ್ತಲೆ ಇದ್ದಾರೆ. ಯುವತಿಯೊಬ್ಬಳು ಹೈಕೋರ್ಟ್ ಮುಂಭಾಗವೇ ಕಿಕಿ ಡ್ಯಾನ್ಸ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.

ಭಾನುವಾರ ರಜೆ ಇದ್ದ ಕಾರಣ ಯುವತಿ ಸಂಜೆ ಹೈಕೋರ್ಟ್ ಬಳಿ ಕಾರಿನಲ್ಲಿ ಹೋಗಿದ್ದಾಳೆ. ಬಳಿಕ ಯಾರು ಇಲ್ಲದ ವೇಳೆ ಕಾರಿನಿಂದ ಇಳಿದು ಡ್ಯಾನ್ಸ್ ಮಾಡುತ್ತಾ ಹೋಗಿದ್ದಾಳೆ. ಅಲ್ಲದೇ ಡ್ಯಾನ್ಸ್ ಮಾಡುತ್ತಲೇ ಯುವತಿ ಕಾರ್ ಹತ್ತಿದ್ದಾಳೆ. ಈ ಎಲ್ಲ ದೃಶ್ಯವನ್ನು ಸ್ಥಳದಲ್ಲಿದ್ದವರು ತಮ್ಮ ಮೊಬೈಲಿನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ.

ಕಿಕಿ ಚಾಲೆಂಜ್ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದರೂ ಕೆಲ ನಟ-ನಟಿಯರು, ಯುವಕ-ಯುವತಿಯರು ಮಾತ್ರವಲ್ಲ ಮಕ್ಕಳೂ ಕೂಡ ಈ ಸಾಮಾಜಿಕ ವ್ಯಸನಕ್ಕೆ ತುತ್ತಾಗುತ್ತಿರುವುದು ವಿಪರ್ಯಾಸ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...