alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜ್ಯ ರಾಜಧಾನಿಯಲ್ಲಿ ನಡೆದಿದೆ ಬೆಚ್ಚಿಬೀಳಿಸುವ ಕಿಡ್ನಾಪ್

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜುಲೈ 5 ರಂದು ನಡೆದಿದ್ದ ಅಧಿಕಾರಿಯೊಬ್ಬರ ಅಪಹರಣ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಬೆಚ್ಚಿಬೀಳಿಸುವಂತಿದೆ.

ಶಾಂತಿನಗರ ಸಬ್ ರಿಜಿಸ್ಟ್ರಾರ್ ರಂಗಸ್ವಾಮಿಯವರು ಜುಲೈ 5 ರಂದು ರಸ್ತೆಯಲ್ಲಿ ನಡೆದು ಹೋಗುತ್ತಿರುವಾಗಲೇ ಅಪಹರಣಗೊಂಡಿದ್ದು, ಅಪಹರಣಕಾರರು ರಾತ್ರಿಯಿಡೀ ಅವರಿಗೆ ಟಾರ್ಚರ್ ಮಾಡಿದ್ದಾರೆಂದು ಹೇಳಲಾಗಿದೆ.

ನಿಮ್ಮ ಕೈ ಕೆಳಗಿನ ಸಿಬ್ಬಂದಿಗಳಿಗೆ ನೀವು ಕಿರುಕುಳ ನೀಡುತ್ತಿದ್ದೀರಿ. ಅವರುಗಳಿಗೆ ನ್ಯಾಯ ಕೊಡಿಸಲೆಂದೇ ನಾವು ಬಂದಿದ್ದೇವೆ ಎಂದು ಹೇಳಿರುವ ಅಪಹರಣಕಾರರು ಟಾರ್ಚರ್ ನೀಡಿದ ಬಳಿಕ ಜುಲೈ 6 ರಂದು ಕನಕಪುರ ರಸ್ತೆಯಲ್ಲಿ ಬಿಟ್ಟು ಹೋಗಿದ್ದಾರೆ.

ಇದೀಗ ಪ್ರಕರಣ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಕಚೇರಿಯ ಕೆಲ ಸಿಬ್ಬಂದಿ ಕುಮ್ಮಕ್ಕಿನಿಂದಲೇ ಈ ಅಪಹರಣ ನಡೆದಿರಬಹುದೆಂದು ಶಂಕಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...