alex Certify
ಕನ್ನಡ ದುನಿಯಾ       Mobile App
       

Kannada Duniya

ರಾಸಲೀಲೆ ವಿಡಿಯೋದಲ್ಲಿರುವುದು ನಾನಲ್ಲ ಎಂದ ನಟಿ

ಬೆಂಗಳೂರು: ಹುಣಸಮಾರನಹಳ್ಳಿ ಜಂಗಮ ಮಠದಲ್ಲಿ ಪೀಠಾಧ್ಯಕ್ಷರಾಗಲು ಮುಂದಾಗಿದ್ದ ದಯಾನಂದ್ ಅವರೊಂದಿಗೆ ನಟಿಯೊಬ್ಬರು ರಾಸಲೀಲೆ ನಡೆಸಿದ ವಿಡಿಯೋ ವೈರಲ್ ಆಗಿ ಹಲ್ ಚಲ್ ಎಬ್ಬಿಸಿದೆ.

ವಿಡಿಯೋದಲ್ಲಿರುವುದು ‘ಖತರ್ನಾಕ್’ ಸೇರಿದಂತೆ ಕೆಲವು ಚಿತ್ರಗಳಲ್ಲಿ ಅಭಿನಯಿಸಿದ್ದ ಕಾವ್ಯಾ ಆಚಾರ್ಯ ಎಂದು ಹೇಳಲಾಗಿತ್ತು.

ತಮ್ಮ ಬಗ್ಗೆ ವಿವಾದವಾಗುತ್ತಿದ್ದಂತೆ ಕಾವ್ಯಾ ಆಚಾರ್ಯ ಸ್ಪಷ್ಟನೆ ನೀಡಿದ್ದಾರೆ. ವಿಡಿಯೊದಲ್ಲಿರುವುದು ತಾವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಿನಿಮಾಗಳಿಂದ ದೂರವಾದ ಬಳಿಕ ಕಾವ್ಯಾ, ದಯಾನಂದ್ ಅವರೊಂದಿಗೆ ಗೆಳೆತನ ಬೆಳೆಸಿದ್ದರೆನ್ನಲಾಗಿದೆ. ಆದರೆ, ಕಾವ್ಯಾರನ್ನು ಮುಂದಿಟ್ಟುಕೊಂಡು ಕೆಲವರು ಹಣಕ್ಕಾಗಿ ಸ್ವಾಮೀಜಿಯಾಗಲು ಹೊರಟಿದ್ದ ದಯಾನಂದ್ ನನ್ನು ಖೆಡ್ಡಾಕ್ಕೆ ಬೀಳಿಸಿರುವ ಸಾಧ್ಯತೆ ಕೂಡ ಇದೆ ಎಂದು ಹೇಳಲಾಗಿದೆ.

ವಿಡಿಯೊದಲ್ಲಿರುವುದು ಕಾವ್ಯಾ ಆಚಾರ್ಯ ಎಂದು ಬಯಲಾಗ್ತಿದ್ದಂತೆ ಅವರು ಸ್ಪಷ್ಟನೆ ನೀಡಿದ್ದು, ನನಗೆ ಯಾವ ಸ್ವಾಮೀಜಿಯ ಪರಿಚಯವಿಲ್ಲ. ಬೇಕೆಂದೇ ತಮ್ಮ ಹೆಸರನ್ನು ಹರಿಯಬಿಡಲಾಗಿದೆ. ವಿಡಿಯೋದಲ್ಲಿರುವುದು ನಾನಲ್ಲ ಎಂದು ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...