alex Certify
ಕನ್ನಡ ದುನಿಯಾ       Mobile App
       

Kannada Duniya

ಮತದಾನ ಹೆಚ್ಚಳಕ್ಕೆ ನಡೆದಿದೆ ಹೀಗೊಂದು ಚಿಂತನೆ

ಮೇ 12 ರಂದು ರಾಜ್ಯದಲ್ಲಿ ಚುನಾವಣೆ ನಡೆಯಲಿದೆ. ಐದು ವರ್ಷಗಳಿಗೆ ಒಮ್ಮೆ ಬರುವ ಮತದಾನದ ಹಬ್ಬಕ್ಕೆ ಎಲ್ಲ ಪಕ್ಷಗಳು ಭರ್ಜರಿ ತಯಾರಿ ನಡೆಸಿದ್ರೆ, ಇತ್ತ ಚುನಾವಣಾ ಆಯೋಗ ಮತದಾರರಿಗೆ ಸಿಹಿ ಸುದ್ದಿಯನ್ನು ನೀಡಿದೆ.

ಹೌದು….ಚುನಾವಣಾ ಆಯೋಗ ಈ ಬಾರಿಯ ಮತದಾನದ ಅವಧಿಯನ್ನು ವಿಸ್ತರಣೆ ಮಾಡಿದೆ. ಅಂದ ಹಾಗೆ ಮೇ 12 ರಂದು ಮತದಾನ ಬೆಳಿಗ್ಗೆ 7 ರಿಂದ ಸಂಜೆ 6 ಘಂಟೆವರೆಗೆ ನಡೆಯಲಿದೆ. ಇನ್ನು ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳತ್ತ ಮತದಾರರನ್ನು ಸೆಳೆಯಲು ಆಯೋಗ ಸಿದ್ಧತೆ ಮಾಡಿಕೊಂಡಿದೆ.

ಅಲ್ಲದೇ ಮತದಾನದ ದಿನದಂದು ಶಾಪಿಂಗ್ ಮಾಲ್​ ಬಂದ್​ ಮಾಡಲು ಚಿಂತನೆ ನಡೆಸಲಾಗಿದೆ. ಬೆಂಗಳೂರು ನಗರದ ಮಲ್ಟಿಫ್ಲೆಕ್ಸ್​​ಗಳನ್ನು, ಮೇ12 ರಂದು ಚುನಾವಣೆ ದಿನ ಬೆಳಿಗ್ಗೆ 7 ರಿಂದ ಸಂಜೆ 6 ಘಂಟೆವರೆಗೆ ಬಂದ್​ ಮಾಡಲು ಯೋಚನೆ ನಡೆದಿದೆ. ಒಂದು ವೇಳೆ ಈ ಚಿಂತನೆ ಕಾರ್ಯರೂಪಕ್ಕೆ ಬಂದಲ್ಲಿ, ಮತದಾನ ಮಾಡುವುದನ್ನು ಬಿಟ್ಟು ಶಾಪಿಂಗ್ ಮಾಡಲು ಬರುವ ಜನರಿಗೆ ಈ ಸುದ್ದಿ ಶಾಕ್​ ನೀಡಲೂಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...