alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ರಾಮಸ್ಥರ ನೆರವಿನಿಂದ ಮತ್ತೆ ಸಿಕ್ತು ಮಣ್ಣಲ್ಲಿ ಹುದುಗಿದ್ದ ವಧುವಿನ ಆಭರಣ

ಕೊಡಗಿನಲ್ಲಿ ಕಾಣಿಸಿಕೊಂಡ ಮಳೆ, ಪ್ರವಾಹ ಅಲ್ಲಿನವರ ಸರ್ವಸ್ವವನ್ನೇ ಕಸಿದುಕೊಂಡಿದೆ. ಮನೆ, ತೋಟ, ಆಹಾರ, ಬಟ್ಟೆ ಏನೂ ಇಲ್ಲದೆ ಖಾಲಿ ಕೈನಲ್ಲಿ ಹೊಸ ಬದುಕು ಕಟ್ಟಿಕೊಳ್ಳುವ ಸವಾಲು ಎದುರಾಗಿದೆ. ಪ್ರವಾಹ ಕಡಿಮೆಯಾದ ಮೇಲೆ ಸಂತ್ರಸ್ತರು ತಮ್ಮ ಮನೆ ಎಲ್ಲಿತ್ತು ಎಂಬ ಹುಡುಕಾಟ ಶುರು ಮಾಡಿದ್ದಾರೆ. ಈ ಮಧ್ಯೆ ಅಲ್ಲಿ ನಡೆದ ಘಟನೆಯೊಂದು ಎಲ್ಲರ ಖುಷಿಗೆ ಕಾರಣವಾಗಿದೆ.

ಕುಸುಮಾ ಎಂಬ ಯುವತಿ ಮದುವೆ ಆಗಸ್ಟ್ 26 ರಂದು ನಡೆಯಬೇಕಿತ್ತು. ಆಗಸ್ಟ್ 16 ರಂದು ಬಂದ ಮಳೆ, ಭೂಕುಸಿತ ಕುಸುಮಾ ಕನಸನ್ನು ನುಚ್ಚು ನೂರು ಮಾಡಿತ್ತು. ಮನೆ ಸಂಪೂರ್ಣವಾಗಿ ಕುಸಿದಿದ್ದು, ಮದುವೆಗಾಗಿ ಮಾಡಿಸಿದ್ದ ಒಡವೆ, ಕೂಡಿಟ್ಟ ಹಣವೆಲ್ಲ ಭೂಮಿ ಪಾಲಾಗಿತ್ತು.

ಕುಸುಮಾ ತಂದೆ ಕಾಫಿ ತೋಟದಲ್ಲಿ ಕೆಲಸ ಮಾಡುವವರಾಗಿದ್ದು, ಮಗಳ ಮದುವೆಗಾಗಿ ಜೀವನ ಪೂರ್ತಿ ದುಡಿದು ಆಭರಣ ಮಾಡಿಸಿದ್ದರು. ಅದಿಲ್ಲದೆ ಹೇಗೆ ಮದುವೆ ಮಾಡುವುದು ಎಂಬ ಚಿಂತೆ ಅವರನ್ನು ಕಾಡಿತ್ತು. ನೆರೆಯವರ ಸಹಾಯ ಕೇಳಿದ್ದರು.

ಮಾನವೀಯತೆ ಮೆರೆದ ಜನರು ಕುಸುಮಾ ಮನೆಯಿದ್ದ ಜಾಗವನ್ನು ಅಗೆದಿದ್ದಾರೆ. ಮತ್ತೆ ಭೂಕುಸಿತವುಂಟಾದ್ರೆ ಎಂಬ ಭಯದ ಮಧ್ಯೆಯೇ ಕೆಲಸ ನಡೆದಿದೆ. ಶಾಸಕ ಅಪ್ಪಚ್ಚು ರಂಜನ್ ಜೆಸಿಬಿ ನೀಡಿ ನೆರವಾಗಿದ್ದಾರೆ. ಮನೆ ಅವಶೇಷಗಳಡಿ ಹುದುಗಿದ್ದ ಕಪಾಟು ಸಿಕ್ಕಿದೆ. ಅದ್ರಲ್ಲಿದ್ದ ಆಭರಣ ಪಾಲಕರ ಕೈ ಸೇರಿದೆ. ಆದ್ರೆ ಹಣ ಸಿಕ್ಕಿಲ್ಲ. ಕಷ್ಟಪಟ್ಟು ದುಡಿದು ಮಗಳಿಗಾಗಿ ಮಾಡಿಸಿದ್ದ ಒಡವೆ ಮತ್ತೆ ಸಿಕ್ಕಿದ್ದು, ಕುಸುಮಾ ಕುಟುಂಬಸ್ಥರ ಖುಷಿಗೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...