alex Certify
ಕನ್ನಡ ದುನಿಯಾ       Mobile App
       

Kannada Duniya

ಬಸ್ ನಲ್ಲಿ ಸಾಗಿಸಿದ್ದಾರೆ ಪೊಲೀಸ್ ಪೇದೆ ಮೃತದೇಹ

cop

ಉಡುಪಿಯಲ್ಲಿ ಪೊಲೀಸ್ ಪೇದೆಯೊಬ್ಬರ ಮೃತದೇಹವನ್ನು ಕೆ ಎಸ್ ಆರ್ ಪಿ ಬಸ್ ನಲ್ಲಿ ಸಾಗಿಸಿರುವ ಫೋಟೋ ವೈರಲ್ ಆಗಿದೆ. ಪೊಲೀಸರ ಮೃತದೇಹವನ್ನು ಕೊಂಡೊಯ್ಯಲು ಕನಿಷ್ಟ ಆಂಬ್ಯುಲೆನ್ಸ್ ವ್ಯವಸ್ಥೆಯನ್ನೂ ಮಾಡದ ಉಡುಪಿ ಜಿಲ್ಲಾಡಳಿತದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಬಾಗಲಕೋಟೆ ಮೂಲದ ಪೊಲೀಸ್ ಮಹಾಂತ ಬಸಪ್ಪ ಎಂಬುವವರು ಮೂತ್ರಪಿಂಡ ವೈಫಲ್ಯದಿಂದಾಗಿ ಕಳೆದ ಶುಕ್ರವಾರ ಮೃತಪಟ್ಟಿದ್ದರು. ಮಣಿಪಾಲ್ ನಿಂದ ಅವರ ಶವವನ್ನು ಬಾಗಲಕೋಟೆಗೆ ಸಾಗಿಸಲು ಆಂಬ್ಯುಲೆನ್ಸ್ ಲಭ್ಯವಿರಲಿಲ್ಲ. ಬದಲಾಗಿ ಕೆ ಎಸ್ ಆರ್ ಪಿ ಬಸ್ ನಲ್ಲಿ ಮೃತದೇಹವನ್ನು ಕೊಂಡೊಯ್ಯಲಾಗಿದೆ.

ಮಹಾಂತ ಬಸಪ್ಪ ಅವರು ಮುನಿರಾಬಾದ್ ಕೆ ಎಸ್ ಆರ್ ಪಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತ ಮಹಾಂತ ಅವರ ಕುಟುಂಬದ 10-12 ಸದಸ್ಯರು ಕೂಡ ಇದ್ದಿದ್ದರಿಂದ ಆಂಬ್ಯುಲೆನ್ಸ್ ಬದಲು ಬಸ್ ಕಳುಹಿಸಲಾಗಿದೆ ಅಂತಾ ಕೆ ಎಸ್ ಆರ್ ಪಿ ಮಂಗಳೂರು ಬೆಟಾಲಿಯನ್ ಕಮಾಂಡಂಟ್ ಜನಾರ್ಧನ್ ಸಮರ್ಥಿಸಿಕೊಂಡಿದ್ದಾರೆ.

ಸಾವಿನ ನಂತರವೂ ಆಂಬ್ಯುಲೆನ್ಸ್ ಕಳಿಸಬೇಕಾದ ಅಗತ್ಯವೇನಿಲ್ಲ. 2-3 ದಿನಗಳ ಕಾಲ ಆಂಬ್ಯುಲೆನ್ಸ್ ಅನ್ನು ಬಾಗಲಕೋಟೆಗೆ ಕಳಿಸಿದ್ರೆ, ಇಲ್ಲೇನಾದ್ರೂ ತುರ್ತು ಪರಿಸ್ಥಿತಿ ಬಂದ್ರೆ ಏನು ಗತಿ? ಅಂತಾನೂ ಪ್ರಶ್ನಿಸಿದ್ದಾರೆ. ವಿನಾಕಾರಣ ಅಪಾರ್ಥ ಕಲ್ಪಿಸಲಾಗುತ್ತಿದೆ ಅಂತಾ ಆರೋಪ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...