alex Certify
ಕನ್ನಡ ದುನಿಯಾ       Mobile App
       

Kannada Duniya

ಲೋಕಾಯುಕ್ತಕ್ಕೆ ‘ಕೊನೆ ಮೊಳೆ’ ಹೊಡೆದ ಸಿದ್ದರಾಮಯ್ಯ ಸರ್ಕಾರ !

02-lokayukta-karnataka-600

ಹಲವು ದಿನಗಳಿಂದ ಲೋಕಾಯುಕ್ತ ಸಂಸ್ಥೆಯ ವಿವಾದವನ್ನು ಕಂಡರೂ ಕಾಣದಂತಿದ್ದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಇದೀಗ ‘ಭ್ರಷ್ಟಾಚಾರ ನಿಗ್ರಹ ದಳ’ ಸ್ಥಾಪಿಸುವ ಮೂಲಕ ಲೋಕಾಯುಕ್ತ ಸಂಸ್ಥೆಯ ‘ಹಲ್ಲು’ ಕೀಳಲು ಸಫಲವಾಗಿದೆ.

ಹೌದು. ಎಡಿಜಿಪಿ ನೇತೃತ್ವದಲ್ಲಿ ಹೊಸ ಭ್ರಷ್ಟಾಚಾರ ನಿಗ್ರಹದಳ ಸ್ಥಾಪನೆ ಮಾಡುವಂತೆ ಮಾರ್ಚ್ 14 ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು ಮಾತ್ರವಲ್ಲ, ಭ್ರಷ್ಟಾಚಾರ ತಡೆ ಕಾಯ್ದೆಯ ಪರಿಣಾಮಕಾರಿ ಜಾರಿಗಾಗಿ ದಳ ಸ್ಥಾಪನೆ ಮಾಡಿದ್ದು, ಸ್ವತಂತ್ರವಾದ ತನಿಖೆಯ ಅಧಿಕಾರ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಲಭ್ಯವಾಗಲಿದೆ ಎನ್ನಲಾಗುತ್ತಿದೆ.

ಆದರೆ ಭ್ರಷ್ಟಾಚಾರ ನಿಗ್ರಹದಳ ಸ್ಥಾಪನೆಯಿಂದ ಈಗಿರುವ ಲೋಕಾಯುಕ್ತ ಪೊಲೀಸರ ಅಧಿಕಾರಕ್ಕೆ ಕತ್ತರಿ ಬೀಳಲಿದ್ದು, ಲೋಕಾಯುಕ್ತ ಕಾಯ್ದೆ ಜಾರಿಗೆ ತರಲು ಮಾತ್ರವೇ ಲೋಕಾಯುಕ್ತ ಪೊಲೀಸರು ಸೀಮಿತವಾಗಿರುತ್ತಾರೆ ಎನ್ನಲಾಗಿದೆ. ಸದ್ಯದಲ್ಲಿಯೇ ಲೋಕಾಯುಕ್ತ ಪೊಲೀಸರ ಅಧಿಕಾರ ವಾಪಸ್ ಗೆ ಶೀಘ್ರ ಅಧಿಸೂಚನೆ ಹೊರಬೀಳುವ ಸಾಧ್ಯತೆಯೂ ದಟ್ಟವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...