alex Certify
ಕನ್ನಡ ದುನಿಯಾ       Mobile App
       

Kannada Duniya

ದ.ಕನ್ನಡದ 12 ಕ್ಷೇತ್ರಗಳಲ್ಲಿ ಬಿಜೆಪಿಗೆ ಜಯ : ಮುನ್ನಡೆಯಲ್ಲಿ ಕಮಲ

ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಇನ್ನೇನು ಪ್ರಕಟಗೊಳ್ಳಲಿದೆ. ಮತ ಎಣಿಕೆ ಕಾರ್ಯ ಮುಂದುವರೆದಿದ್ದು, ಉಡುಪಿ ದಕ್ಷಿಣ ಕನ್ನಡದ 12 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಸದ್ಯ ಬಿಜೆಪಿ ಮುಂದಿದ್ದು, ಯಾರಿಗೆ ಗದ್ದುಗೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಗೆಲುವಿನ ಪಟ್ಟಿ ನೋಡೋದಾದ್ರೆ ಚಿತ್ತಾಪುರದಲ್ಲಿ ಪ್ರಿಯಾಂಕ ಖರ್ಗೆ ಗೆಲುವು ಸಾಧಿಸಿದ್ದಾರೆ. ಮಂಗಳೂರಿನ ಉಲ್ಲಾಳದಲ್ಲಿ ಖಾದರ್, ಕಾರ್ಕಳದಲ್ಲಿ ಬಿಜೆಪಿಯ ಸುನೀಲ್ ಕುಮಾರ್, ನಂಜನಗೂಡಿನಲ್ಲಿ ಹರ್ಷವರ್ದನ್ ಗೆಲುವು ಸಾಧಿಸಿದ್ದಾರೆ. ಶಿವಮೊಗ್ಗ ನಗರದಲ್ಲಿ ಈಶ್ವರಪ್ಪ, ಚಿಂಚೊಳ್ಳಿಯಲ್ಲಿ ಕಾಂಗ್ರೆಸ್ ಉಮೇಶ್ ಜಾದವ್, ನರಸೀಪುರದಲ್ಲಿ ಜೆಡಿಎಸ್ ಅಶ್ವಿನ್, ಹಳಿಯಾಳದಲ್ಲಿ ಆರ್.ವಿ.ದೇಶಪಾಂಡೆ ಗೆಲುವು ಸಾಧಿಸಿದ್ದಾರೆ.

ಗುಂಡ್ಲುಪೇಟೆಯಲ್ಲಿ ನಿರಂಜನ್, ಮಂಡ್ಯದಲ್ಲಿ ಶ್ರೀನಿವಾಸ್, ತುಮಕುರು ಗ್ರಾಮಾಂತರದಲ್ಲಿ ಜೆಡಿಎಸ್  ಗೆಲುವು ಸಾಧಿಸಿದೆ. ಶಿವಾಜಿನಗರದಲ್ಲಿ ರೋಷನ್ ಬೇಗ್ 14 ಸಾವಿರ ಮತಗಳ ಅಂತರದಲ್ಲಿ ಜಯಸಾಧಿಸಿದ್ದಾರೆ. ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಗೆಲುವು ಸಾಧಿಸಿದ್ದಾರೆ.  ಶಿರಾದಲ್ಲಿ ಟಿ.ಬಿ. ಜಯಚಂದ್ರಗೆ ಸೋಲಾಗಿದೆ. ಹರಪನ ಹಳ್ಳಿಯಲ್ಲಿ ಕರುಣಾಕರ ರೆಡ್ಡಿ, ಸಾಗರದಲ್ಲಿ ಹರತಾಳ ಹಾಲಪ್ಪ ಜಯ ಸಾಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...