alex Certify
ಕನ್ನಡ ದುನಿಯಾ       Mobile App
       

Kannada Duniya

ಕರ್ನಾಟಕಕ್ಕೂ ಬರಲಿದೆ ಬಡವರ ಕ್ಯಾಂಟೀನ್

CANTEENತಮಿಳುನಾಡು ಮತ್ತು ಆಂಧ್ರಪ್ರದೇಶ ಸರ್ಕಾರಗಳ ಹಾದಿಯಲ್ಲೇ ನಡೆಯಲು ಕರ್ನಾಟಕ ಸರ್ಕಾರ ಕೂಡ ಮುಂದಾಗಿದೆ. ತಮಿಳುನಾಡು ಮತ್ತು ಆಂಧ್ರದಲ್ಲಿರುವಂತೆ ಕರ್ನಾಟಕದಲ್ಲೂ ಬಡವರಿಗಾಗಿ ಕ್ಯಾಂಟೀನ್ ತೆರೆಯಲು ರಾಜ್ಯ ಸರ್ಕಾರ ಮುಂದಾಗಿದೆ.

ಸಿಎಂ ಸಿದ್ದರಾಮಯ್ಯ ಇಂಥದ್ದೊಂದು ಯೋಜನೆ ರೂಪಿಸ್ತಿರೋದಾಗಿ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ಅದೆಷ್ಟೋ ಜನರಿಗೆ ಸರಿಯಾದ ಸೂರಿಲ್ಲ, ರಸ್ತೆಗಳ ಪಕ್ಕದಲ್ಲಿ, ಬಸ್ ಸ್ಟ್ಯಾಂಡ್ ಗಳಲ್ಲಿ ಮಲಗಿ ಕಾಲ ಕಳೆಯುವವರು ಕೂಡ ಇದ್ದಾರೆ. ಅಂಥವರಿಗೆಲ್ಲ ಒಳ್ಳೆ ಗುಣಮಟ್ಟದ ಸ್ವಚ್ಛ ಆಹಾರ ಸಿಗುವಂತಾಗಬೇಕು ಅನ್ನೋ ನಿಟ್ಟಿನಲ್ಲಿ ಮೊಬೈಲ್ ಕ್ಯಾಂಟೀನ್ ಆರಂಭಿಸ್ತಿರೋದಾಗಿ ಖಾದರ್ ಹೇಳಿದ್ದಾರೆ.

ತಮಿಳುನಾಡಿನಲ್ಲಿ ಈಗಾಗ್ಲೇ ಅಮ್ಮ ಕ್ಯಾಂಟೀನ್ ಗಳು ಬಹು ಜನಪ್ರಿಯವಾಗಿವೆ. ತಮಿಳುನಾಡಿನ ಬಳಿಕ ಆಂಧ್ರ ಸರ್ಕಾರ ಕೂಡ ಕಡಿಮೆ ಬೆಲೆಯಲ್ಲಿ ತಿನಿಸುಗಳನ್ನು ಒದಗಿಸುವ ಕ್ಯಾಂಟೀನ್ ಗಳನ್ನು ತೆರೆದು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದೆ. ಇದೇ ಹಾದಿಯಲ್ಲಿ ಸಾಗಲು ಕರ್ನಾಟಕ ಕೂಡ ಮುಂದಾಗಿರುವುದು ಸ್ವಾಗತಾರ್ಹ. ಆದ್ರೆ ಯೋಜನೆ ಹಳ್ಳ ಹಿಡಿಯದೆ ಅದರ ಪ್ರಯೋಜನ ಜನರಿಗೆ ಸಿಗುವಂತಾಗಬೇಕು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...