alex Certify
ಕನ್ನಡ ದುನಿಯಾ       Mobile App
       

Kannada Duniya

ಚಂದ್ರಗ್ರಹಣಕ್ಕೆ ಹೆದರಿದ್ರಾ ಕರ್ನಾಟಕದ ರಾಜಕಾರಣಿಗಳು?

ಇಂದು ಮಾಘ ಪೂರ್ಣಿಮೆ. ಜೊತೆಗೆ ಚಂದ್ರಗ್ರಹಣ. ಬ್ಲೂ ಮೂನ್, ಸೂಪರ್ ಮೂನ್ ಹಾಗೂ ಬ್ಲಡ್ ಮೂನ್ ಎಲ್ಲವೂ ಒಟ್ಟಿಗೆ ಕಾಣಿಸಿಕೊಳ್ಳಲಿದೆ. ವಿಜ್ಞಾನಿಗಳ ಪ್ರಕಾರ ಇದೊಂದು ಆಕಾಶದಲ್ಲಿ ನಡೆಯುವ ಘಟನೆಯಷ್ಟೆ. ಆದ್ರೆ ಹಿಂದೂ ಧರ್ಮದಲ್ಲಿ ಮೂರೂ ಒಟ್ಟಿಗೆ ಸಂಭವಿಸಿದ್ರೆ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.

ಗ್ರಹಣದ ವೇಳೆ ಜಪ ಮಾಡಿ ಜನರು ದೋಷ ನಿವಾರಣೆ ಮಾಡಿಕೊಳ್ಳೊದು ಸಹಜ. ಕರ್ನಾಟಕದ ರಾಜಕಾರಣಿಗಳೂ ಇದ್ರಿಂದ ಹೊರತಾಗಿಲ್ಲ. ಮಾಜಿ ಪ್ರಧಾನಿ ದೇವೇಗೌಡರ ಮನೆಯಲ್ಲಿ ಇಂದು ಸತ್ಯನಾರಾಯಣ ಪೂಜೆ ನೆರವೇರಿದೆ. ದೇವೇಗೌಡ ಹಾಗೂ ಪತ್ನಿ ಚೆನ್ನಮ್ಮ ಗ್ರಹಣದ ಅಶುಭ ಫಲ ತಟ್ಟದಂತೆ ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ಮಾಜಿ ಪಿಎಂ ದೇವೇಗೌಡರು, ಹಿಂದೂ ಧರ್ಮದ ಸಂಪ್ರದಾಯಗಳನ್ನು ನಾವು ಪಾಲಿಸುತ್ತೇವೆ. ಗ್ರಹಣದ ಹಿನ್ನೆಲೆಯಲ್ಲಿ ಪೂಜೆ ನಡೆದಿಲ್ಲ. ಪ್ರತಿ ಮಾಘ ಪೂರ್ಣಿಮೆಯಂದು ಮನೆಯಲ್ಲಿ ಸತ್ಯನಾರಾಯಣನ ಪೂಜೆ ನಡೆಯುತ್ತದೆ. ಹಾಗೆ ಈ ಬಾರಿಯೂ ನಡೆದಿದೆ ಎಂದಿದ್ದಾರೆ.

ಇತ್ತ ಸಿಎಂ ಸಿದ್ದರಾಮಯ್ಯ ಮನೆಯಲ್ಲಿಯೂ ಇಂದು ವಿಶೇಷ ಪೂಜೆ ನೆರವೇರಿದೆ. ಸಿಎಂ ಅಧಿಕಾರಿಗಳ ಜೊತೆ ಸಭೆಯಲ್ಲಿ ಬ್ಯುಸಿಯಿದ್ದರೆ ಪತ್ನಿ ಪಾರ್ವತಿ ಮನೆಯಲ್ಲಿ ಪೂಜೆ ನೆರವೇರಿಸಿ ಶುಭ ಫಲ ಪ್ರಾಪ್ತಿಗೆ ಪ್ರಾರ್ಥಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...