alex Certify
ಕನ್ನಡ ದುನಿಯಾ       Mobile App
       

Kannada Duniya

ದೊಡ್ಡ ಗೌಡರ ಸಮ್ಮುಖದಲ್ಲಿ ಸಚಿವರ ಪಟ್ಟಿ ಫೈನಲ್

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಸಂಪುಟ ರಚನೆ ಅಂತಿಮ ಕಸರತ್ತು ಈಗ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ಪದ್ಮನಾಭನಗರದ ಮನೆಯಲ್ಲಿ ನಡೆಯುತ್ತಿದೆ.

ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ಸಮ್ಮುಖದಲ್ಲಿ ನಡೆಯುತ್ತಿರುವ ಈ ಸಭೆಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸೇರಿದಂತೆ ಮೈತ್ರಿ ಸರ್ಕಾರದ ಉಭಯ ಪಕ್ಷಗಳ ಮುಖಂಡರು ಭಾಗವಹಿಸಿ ಮಹತ್ವದ ಚರ್ಚೆ ನಡೆಸುತ್ತಿದ್ದಾರೆ. ಈ ಸಭೆಯೇ ಫೈನಲ್ ಎಂದು ಹೇಳಲಾಗುತ್ತಿದ್ದು, ಯಾವ ಯಾವ ಶಾಸಕರಿಗೆ ಯಾವ ಖಾತೆ ನೀಡಬೇಕೆಂದು ಅಂತಿಮಗೊಳಿಸಲಾಗುತ್ತಿದೆ.

ಜೆಡಿಎಸ್ ಪಕ್ಷದ ಪಾಳೆಯಕ್ಕೆ ಹಣಕಾಸು, ಕಂದಾಯ, ಇಂಧನ, ಲೋಕೋಪಯೋಗಿ, ಅಬಕಾರಿ, ಸಹಕಾರ ಖಾತೆಗಳು ಸೇರಿದಂತೆ ಒಟ್ಟು 12 ಸಚಿವ ಸ್ಥಾನಗಳನ್ನು ಬಿಟ್ಟುಕೊಟ್ಟಿದ್ದು, ಜೆಡಿಎಸ್ ನ ಯಾವ ಶಾಸಕರಿಗೆ ಮಂತ್ರಿ ಪದವಿ ಒಲಿಯಲಿದೆ ಎಂಬುದನ್ನು ಕಾದುನೋಡಬೇಕಾಗಿದೆ.

ಕಾಂಗ್ರೆಸ್ ಪಾಲಿಗೆ ಗೃಹ, ಆರೋಗ್ಯ, ಜಲಸಂಪನ್ಮೂಲ, ವಸತಿ, ಪಂಚಾಯತ್ ರಾಜ್, ಕೃಷಿ, ಸಮಾಜ ಕಲ್ಯಾಣ, ಗಣಿ ಮತ್ತು ಭೂ ವಿಜ್ಞಾನ ಜವಾಬ್ದಾರಿಯ ಜೊತೆಗೆ 22 ಖಾತೆಗಳನ್ನು ಬಿಟ್ಟುಕೊಡಲಾಗಿದೆ. ಮೂಲಗಳ ಪ್ರಕಾರ ಡಿ.ಕೆ. ಶಿವಕುಮಾರ್ ಅವರಿಗೆ ಗೃಹ ಖಾತೆ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ. ಕಳೆದ ಎರಡು-ಮೂರು ಬಾರಿ ಸಚಿವರಾಗಿದ್ದವರು ಈ ಬಾರಿ ಪಕ್ಷ ಸಂಘಟನೆಯಲ್ಲಿ ನಿರತರಾಗಲಿ, ಹೊಸಬರಿಗೆ ಅವಕಾಶ ನೀಡಿ ಪ್ರೋತ್ಸಾಹಿಸೋಣ ಎಂಬ ಸಲಹೆಯೂ ಕಾಂಗ್ರೆಸ್ ಮುಖಂಡರಿಂದ ಬರುತ್ತಿದೆ. ಹೆಚ್.ಕೆ. ಪಾಟೀಲ್, ಆರ್.ವಿ. ದೇಶಪಾಂಡೆ, ಎಸ್.ಆರ್. ಪಾಟೀಲ್ ಅವರಿಗೆ ಈ ಬಾರಿ ಸಚಿವ ಸ್ಥಾನ ಸಿಗುವುದು ಅನುಮಾನ ಎಂಬ ಸುದ್ದಿ ಹೊರಬಿದ್ದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...