alex Certify
ಕನ್ನಡ ದುನಿಯಾ       Mobile App
       

Kannada Duniya

ದೇವರ ದರ್ಶನಕ್ಕೂ ಬೇಕು ಆಧಾರ್ ಕಾರ್ಡ್

ಕರ್ನಾಟಕ ಸರ್ಕಾರ ಚಾರ್ ಧಾಮ್ ಯಾತ್ರೆಗೆ ತೆರಳುವ ಭಕ್ತರಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡಿದೆ. ಬದ್ರಿನಾಥ್, ಕೇದಾರ್ ನಾಥ, ಗಂಗೋತ್ರಿ ಮತ್ತು ಉತ್ತರಾಖಂಡಕ್ಕೆ ತೆರಳುವ ಯಾತ್ರಾರ್ಥಿಗಳು ಆಧಾರ್ ಕಾರ್ಡ್ ಹೊಂದಿರಲೇಬೇಕು.

ಯಾತ್ರಿಗಳಿಗೆ ಸರ್ಕಾರ 20,000 ರೂ. ಟ್ರಾವೆಲ್ ಸಬ್ಸಿಡಿ ನೀಡುತ್ತದೆ. ಆ ಹಣದ ದುರುಪಯೋಗ ತಡೆಯುವ ನಿಟ್ಟಿನಲ್ಲಿ ಆಧಾರ್ ಕಡ್ಡಾಯ ಮಾಡಲಾಗಿದೆ. ಸಬ್ಸಿಡಿಗಾಗಿ ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ಆಧಾರ್ ಕಾರ್ಡ್ ಹೊಂದಿರಬೇಕೆಂದು ಸರ್ಕಾರ ಸೂಚನೆ ನೀಡಿದೆ.

ಪ್ರತಿವರ್ಷ 1000-1500 ಜನರಿಗೆ ಚಾರ್ ಧಾಮ್ ಯಾತ್ರೆಗಾಗಿ ಸಬ್ಸಿಡಿ ನೀಡಲಾಗುತ್ತದೆ. ವರ್ಷದಿಂದ ವರ್ಷಕ್ಕೆ ಯಾತ್ರಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಸುಳ್ಳು ದಾಖಲೆಗಳನ್ನು ಕೊಟ್ಟು ಹಣವನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರೋದ್ರಿಂದ ಆಧಾರ್ ಕಡ್ಡಾಯಗೊಳಿಸಿರುವುದಾಗಿ ಮುಜರಾಯಿ ಇಲಾಖೆ ಹೇಳಿದೆ.

ಈ ಹಿಂದಿನ ಬಿಜೆಪಿ ಸರ್ಕಾರ ಮಾನಸ ಸರೋವರ ಯಾತ್ರೆಗೆ ತೆರಳುವವರಿಗೆ 30,000 ರೂಪಾಯಿ ಸಬ್ಸಿಡಿ ನೀಡುತ್ತಿತ್ತು. ಆದ್ರೆ ಸಿದ್ದರಾಮಯ್ಯ ಸರ್ಕರ ಚಾರ್ ಧಾಮ್ ಯಾತ್ರೆಗೆ ಆರ್ಥಿಕ ನೆರವು ಘೋಷಿಸಿತ್ತು. ಒಮ್ಮೆ ಸಬ್ಸಿಡಿ ಪಡೆದವರು ಮತ್ತೊಮ್ಮೆ ಅರ್ಜಿ ಹಾಕುವ ಅವಕಾಶವಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...