alex Certify
ಕನ್ನಡ ದುನಿಯಾ       Mobile App
       

Kannada Duniya

LIVE: 2018-19 ನೇ ಸಾಲಿನ ಬಜೆಟ್ ಮುಖ್ಯಾಂಶಗಳು

ಬಜೆಟ್ ನಲ್ಲಿ ರೈತರಿಗೆ ಸಿಹಿ ಸುದ್ದಿ ನೀಡಿದ ಕುಮಾರಸ್ವಾಮಿ.

ಪ್ರತಿ ರೈತ ಕುಟುಂಬದ ಎರಡು ಲಕ್ಷ ರೂಪಾಯಿ ಸಾಲ ಮನ್ನಾ.

34 ಸಾವಿರ ಕೋಟಿ ರೂಪಾಯಿ ಮೊತ್ತದ ರೈತರ ಸಾಲ ಮನ್ನಾ.

ಇಸ್ರೇಲ್ ಮಾದರಿ ಕೃಷಿಗಾಗಿ 150 ಕೋಟಿ ರೂಪಾಯಿ ಮೀಸಲು.

2 ಲಕ್ಷದ 18 ಸಾವಿರದ 488 ಕೋಟಿ ರೂಪಾಯಿ ಬಜೆಟ್ ಗಾತ್ರ.

ರಾಮನಗರದಲ್ಲಿ 40 ಕೋಟಿ ರೂ. ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ.

ಕನಕಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು.

ಸಂಧ್ಯಾ ಸುರಕ್ಷಾ ಯೋಜನೆ ಮೊತ್ತ 600 ರೂ. ನಿಂದ 1,000 ರೂ. ಗೆ ಏರಿಕೆ.

ರೈತರ ಕಲ್ಯಾಣಕ್ಕೆ ರಾಜ್ಯ ರೈತರ ಸಲಹಾ ಸಮಿತಿ ರಚನೆ.

ತೆಂಗು ಬೆಳೆಗಾರರ ಹಿತರಕ್ಷಣೆಗೆ 190 ಕೋಟಿ ರೂಪಾಯಿ.

ವಾಹನ ತೆರಿಗೆ 1100 ರಿಂದ 1200 ರೂ. ಗೆ ಹೆಚ್ಚಳ.

247 ಇಂದಿರಾ ಕ್ಯಾಂಟೀನ್ ಗಳ ಸ್ಥಾಪನೆ.

ಸಾಲ ಮರು ಪಾವತಿಸಿದ ರೈತರಿಗೂ ಸಾಲ ಮನ್ನಾದ ಪ್ರಯೋಜನ.

ಮೈಸೂರಿನಲ್ಲಿ ರೇಷ್ಮೆ ಮಾರಾಟ ಮಾರುಕಟ್ಟೆ ಸ್ಥಾಪನೆ.

ಹಾಸನ ಹಾಲು ಒಕ್ಕೂಟಕ್ಕೆ 50 ಕೋಟಿ ರೂ. ಅನುದಾನ.

ರಾಮನಗರದಲ್ಲಿ ಚಲನಚಿತ್ರ ವಿವಿ ಸ್ಥಾಪನೆಗೆ 30 ಕೋಟಿ ರೂ.

ಸರ್ಕಾರಿ ಪ್ರಾಥಮಿಕ ಶಿಕ್ಷಣದಲ್ಲಿ ಆಂಗ್ಲ ಮಾಧ್ಯಮ.

ಚಿತ್ರದುರ್ಗ ಜಿಲ್ಲೆಯಲ್ಲಿ ಎಲ್ ಇ ಡಿ ಬಲ್ಬ್ ತಯಾರಿಕಾ ಘಟಕ.

ವಿದ್ಯುತ್ ದರ ಪ್ರತಿ ಯೂನಿಟ್ ಗೆ 10 ಪೈಸೆಯಿಂದ 20 ಪೈಸೆಗೆ ಹೆಚ್ಚಳ.

ಮದ್ಯದ ಮೇಲಿನ ತೆರಿಗೆ ಶೇಕಡಾ 4 ರಷ್ಟು ಹೆಚ್ಚಳ.

ಬಿಪಿಎಲ್ ಕುಟುಂಬದ ಗರ್ಭಿಣಿಯರಿಗೆ 6000 ರೂ. ಮಾಸಾಶನ ಮುಖ್ಯಮಂತ್ರಿ ಮಾತೃಶ್ರೀ ಯೋಜನೆಯಿಂದ ಲಭ್ಯ.

ಖಾಸಗಿ ಸೇವಾ ವಾಹನ ತೆರಿಗೆ ಶೇಕಡ 50 ರಷ್ಟು ಹೆಚ್ಚಳ.

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು, ಮಕ್ಕಳಿಗೆ ಬಯೋಮೆಟ್ರಿಕ್.

ಕಂಠೀರವ ಸ್ಟುಡಿಯೋದಲ್ಲಿ ಸುಸಜ್ಜಿತ ಯೋಗ ಕೇಂದ್ರ ಸ್ಥಾಪನೆ.

ಬಿಎಂಟಿಸಿ ಇಂದ 80 ಎಲೆಕ್ಟ್ರಿಕ್ ಬಸ್ ಗಳ ಸೇವೆ.

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ರಚನೆ.

ಸ್ವ ಉದ್ಯೋಗ ಪ್ರೋತ್ಸಾಹಿಸಲು ‘ಕಾಯಕ’ ಯೋಜನೆ ಜಾರಿಗೆ.

ಬೆಂಗಳೂರಿನ ಆರು ಕಡೆ ಎಲಿವೇಟೆಡ್ ಕಾರಿಡಾರ್ ಯೋಜನೆ ಜಾರಿ. ಇದಕ್ಕಾಗಿ15,825 ಕೋಟಿ ರೂ. ವೆಚ್ಚ.

ಧಾರ್ಮಿಕ ಪೀಠಗಳಿಗೆ ಒಟ್ಟು 25 ಕೋಟಿ ರೂಪಾಯಿ ಅನುದಾನ.

ಹಿಂದಿನ ಸರ್ಕಾರದ ಸಾಲ ಮನ್ನಾ ಬಾಕಿ ಪೂರ್ಣ ಪಾವತಿ.

ಕೆ ಆರ್ ಎಸ್  ಅಭಿವೃದ್ಧಿ ಕಾಮಗಾರಿಗೆ 5 ಕೋಟಿ ರೂ. ಯೋಜನೆ.

ನಮ್ಮ ಮೆಟ್ರೋ ಮಾರ್ಗದ 3ನೇ ಹಂತ ವಿಸ್ತರಣೆ.

ಅನ್ನ ಭಾಗ್ಯ ಅಕ್ಕಿ ಯೋಜನೆ 7 ಕೆಜಿ ಗಳಿಂದ 5 ಕೆಜಿ ಗೆ ಇಳಿಕೆ.

ಬಿಪಿಎಲ್ ಪಡಿತರ ಚೀಟಿಗೆ ಒಂದು ಕೆಜಿ ಪಾಮ್ ಎಣ್ಣೆ, ಒಂದು ಕೆಜಿ ಅಯೋಡಿನ್ ಉಪ್ಪು, ಒಂದು ಕೆಜಿ ಸಕ್ಕರೆ, ರಿಯಾಯಿತಿ ದರದಲ್ಲಿ ಅರ್ಧ ಕೆಜಿ ತೊಗರಿಬೇಳೆ ವಿತರಣೆ.

ವಿದ್ಯಾರ್ಥಿಗಳ ದಾಖಲಾತಿ ಕಡಿಮೆ ಇರುವ ಇಪ್ಪತ್ತೇಳು ಸಾವಿರಕ್ಕೂ ಅಧಿಕ ಶಾಲೆಗಳ ವಿಲೀನ.

ತುಮಕೂರು ಜಿಲ್ಲೆಯಲ್ಲಿ ಕ್ರೀಡೆ, ಅಂಗ ಸಾಧನೆಗೆ ವಿಶ್ವವಿದ್ಯಾನಿಲಯ ಸ್ಥಾಪನೆ.

ಹಂಪಿಯಲ್ಲಿ ಪ್ರವಾಸೋದ್ಯಮ ವಿವಿ. ಇದಕ್ಕಾಗಿ 3 ಕೋಟಿ ರೂ. ಅನುದಾನ.

ರೈತರಿಗೆ ಹೊಸ ಸಾಲ ಪಡೆಯಲು ಅವಕಾಶ.

ಬಳ್ಳಾರಿ ಜಿಲ್ಲೆಯಲ್ಲಿ ವಸ್ತ್ರ ಉದ್ಯಮಕ್ಕೆ ಒತ್ತು.

ಚಿಕ್ಕಬಳ್ಳಾಪುರದಲ್ಲಿ ಮೊಬೈಲ್ ಬಿಡಿಭಾಗಗಳ ಘಟಕ ಸ್ಥಾಪನೆ.

ಬೀದರ್ ಜಿಲ್ಲೆಯಲ್ಲಿ ಕೃಷಿ ಉತ್ಪನ್ನ ಸಂರಕ್ಷಣೆ ಯಂತ್ರ ಉತ್ಪಾದನಾ ಘಟಕ.

ಹಾಸನ ಜಿಲ್ಲೆಯ ಕೆರೆಗಳನ್ನು ತುಂಬಿಸಲು 70 ಕೋಟಿ ರೂ. ಮಂಜೂರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...