alex Certify
ಕನ್ನಡ ದುನಿಯಾ       Mobile App
       

Kannada Duniya

ಪರಪ್ಪನ ಅಗ್ರಹಾರ ಕರ್ಮಕಾಂಡ ತನಿಖೆಗೆ ಇನ್ನಷ್ಟು ಕಾಲಾವಕಾಶ

droopa-kide-621x414livemint

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದಿರುವ ಅಕ್ರಮ ಹಾಗೂ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸುತ್ತಿರುವ ಮಾಜಿ ಐಎಎಸ್ ಅಧಿಕಾರಿ ವಿನಯ್ ಕುಮಾರ್ ಇನ್ನಷ್ಟು ಸಮಯ ಕೇಳಿದ್ದಾರೆ. ತನಿಖೆ ಪೂರ್ಣಗೊಳಿಸಲು ಇನ್ನೂ 15 ದಿನಗಳ ಕಾಲಾವಕಾಶ ಬೇಕು ಅಂತಾ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಸರ್ಕಾರ ಕೂಡ ಇದಕ್ಕೆ ಒಪ್ಪಿಕೊಂಡಿದ್ದು, ತಿಂಗಳಾಂತ್ಯದವರೆಗೆ ಸಮಯ ನೀಡಿದೆ. ಕಾರಾಗೃಹದ ಮಾಜಿ ಡಿಐಜಿ ಡಿ.ರೂಪಾ ಅಕ್ರಮಗಳನ್ನು ಬಯಲಿಗೆಳೆದಿದ್ರು. ಮಾಜಿ ಡಿಜಿ&ಐಜಿ ಎಚ್.ಎನ್.ಎಸ್. ರಾವ್ ಕೂಡ ಇದರಲ್ಲಿ ಶಾಮೀಲಾಗಿದ್ದಾರೆಂದು ಆರೋಪ ಮಾಡಿದ್ದರು.

ಎಐಎಡಿಎಂಕೆ ನಾಯಕಿ ಶಶಿಕಲಾಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿತ್ತು. ಪ್ರತ್ಯೇಕ ಅಡುಗೆಮನೆ, 5 ಕೋಣೆಗಳ ಸೆಲ್ ಎಲ್ಲವನ್ನೂ ಕೊಡಲಾಗುತ್ತಿತ್ತು. ಹತ್ತಾರು ಜನರು ಅವರನ್ನು ಭೇಟಿಯಾಗಲು ಅವಕಾಶ ಕಲ್ಪಿಸಲಾಗಿತ್ತು. ಇದಕ್ಕಾಗಿ ಡಿಜಿ ಹಾಗೂ ಇತರ ಅಧಿಕಾರಿಗಳು 2 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಅಂತಾ ಡಿ.ರೂಪಾ ಬಾಂಬ್ ಸಿಡಿಸಿದ್ದರು.

ನಕಲಿ ಸ್ಟಾಂಪ್ ಪೇಪರ್ ದಂಧೆಯ ಕಿಂಗ್ ಪಿನ್ ಅಬ್ದುಲ್ ಕರೀಂ ತೆಲಗಿ ಸೇರಿದಂತೆ ಕೆಲವು ಖೈದಿಗಳಿಗೆ ಡ್ರಗ್ಸ್ ಕೂಡ ಸಪ್ಲೈ ಆಗ್ತಿದೆ ಅನ್ನೋದನ್ನು ಬಯಲು ಮಾಡಿದ್ರು. ಆ ವರದಿಯನ್ನು ಸರ್ಕಾರಕ್ಕೆ ರವಾನಿಸಿದ್ರು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ರಾಜ್ಯ ಸರ್ಕಾರ ಮಾಧ್ಯಮದವರೊಂದಿಗೆ ಮಾತನಾಡದಂತೆ ಡಿ.ರೂಪಾಗೆ ವಾರ್ನ್ ಮಾಡಿದ್ದಲ್ಲದೆ, ಅವರನ್ನು ಎತ್ತಂಗಡಿ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...