alex Certify
ಕನ್ನಡ ದುನಿಯಾ       Mobile App
       

Kannada Duniya

ಮದ್ಯದ ದೊರೆಯ ಕಾರು ಖರೀದಿಸಿದ್ದಾರೆ ಹುಬ್ಬಳ್ಳಿ ಉದ್ಯಮಿ

ಭಾರತದ ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ರೂಪಾಯಿ ಪಂಗನಾಮ ಹಾಕಿ ಮದ್ಯದ ದೊರೆ ಮಲ್ಯ ಲಂಡನ್ ಗೆ ಓಡಿ ಹೋಗಿದ್ದಾರೆ. ಇನ್ನೊಂದ್ಕಡೆ ಸಾಲದ ಹಣ ವಾಪಸ್ ಪಡೆಯಲು ಅವರ ಆಸ್ತಿಯನ್ನು ಹರಾಜು ಹಾಕಲಾಗ್ತಿದೆ. ಮಲ್ಯ ಕಾರನ್ನು ಕೂಡ ಆನ್ ಲೈನ್ ನಲ್ಲಿ ಹರಾಜು ಹಾಕಲಾಗಿದೆ.

ಈ ಕಾರನ್ನು ಹುಬ್ಬಳ್ಳಿಯ ಉದ್ಯಮಿ ಖರೀದಿಸಿದ್ದಾರೆ. ಮಲ್ಯಗೆ ಸೇರಿದ 2 ಕಾರುಗಳನ್ನು ಹರಾಜಿಗೆ ಇಡಲಾಗಿತ್ತು. ಹುಂಡೈ ಸೊನಾಟಾ ಗೋಲ್ಡ್ ಅನ್ನು 40,000 ಹಾಗೂ ಹೋಂಡಾ ಅಕೊರ್ಡ್ ಕಾರನ್ನು 1 ಲಕ್ಷ ರೂಪಾಯಿ ಕೊಟ್ಟು ಹನುಮಂತ ರೆಡ್ಡಿ ಕೊಂಡುಕೊಂಡಿದ್ದಾರೆ.

ಹುಂಡೈ ಕಾರಿನ ಮೂಲ ಬೆಲೆ 13.15 ಲಕ್ಷ ರೂಪಾಯಿ, ಸೆಕೆಂಡ್ ಹ್ಯಾಂಡ್ ಕಾರು ಕೂಡ 2.5 ಲಕ್ಷ ಬೆಲೆಬಾಳುತ್ತದೆ. ಇನ್ನು ಹೋಂಡಾ ಅಕಾರ್ಡ್ ಕಾರಿಗೆ ಮಾರುಕಟ್ಟೆಯಲ್ಲಿ 21 ಲಕ್ಷ ರೂಪಾಯಿ ಬೆಲೆ ಇದೆ. ಆದ್ರೆ ತೆರಿಗೆ ಎಲ್ಲಾ ಸೇರಿ ಕೇವಲ 1,58,000 ರೂಪಾಯಿಗೆ ಎರಡೂ ಕಾರುಗಳು ಹನುಮಂತ ರೆಡ್ಡಿ ಪಾಲಾಗಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...