alex Certify
ಕನ್ನಡ ದುನಿಯಾ       Mobile App
       

Kannada Duniya

ಗೌರವ ಡಾಕ್ಟರೇಟ್ ಗೆ ಬ್ರೇಕ್ ಹಾಕಿದ ರಾಜ್ಯಪಾಲರು

vajubhai wala

ಸಮಾಜದ ಯಾವುದೇ ರಂಗದಲ್ಲಿಯೂ ಸಹ ಗಮನಾರ್ಹ ಸಾಧನೆ ಮಾಡದಿದ್ದರೂ ಸಹ ‘ಪ್ರಭಾವ’ ಬಳಸಿ ಗೌರವ ಡಾಕ್ಟರೇಟ್ ಪಡೆಯುತ್ತಿದ್ದ ಮಹಾಮಹಿಮರ ಆಸೆಗೆ ಇನ್ನು ಮುಂದೆ ಬ್ರೇಕ್ ಬೀಳಲಿದೆ. ಅರೇ ಇದೇನು ಅಂತೀರಾ ..? ಈ ಸ್ಟೋರಿ ಓದಿ.

ಹೌದು. ಮನಸೋ ಇಚ್ಛೆ ಗೌರವ ಡಾಕ್ಟರೇಟ್ ನೀಡುವ ವಿಶ್ವವಿದ್ಯಾಲಯಗಳಿಗೆ ಕಡಿವಾಣ ಹಾಕಲು ರಾಜ್ಯಪಾಲ ವಿ.ಆರ್. ವಾಲಾ ಹೊಸ ಮಾನದಂಡ ಸಿದ್ದಪಡಿಸಿದ್ದು ಅದಕ್ಕಾಗಿಯೇ ರಾಜ್ಯಪಾಲರು ಒಂದು ಸಮಿತಿಯನ್ನು ನೇಮಿಸಿ ಗೌರವ ಡಾಕ್ಟರೇಟ್‍ ಗೆ ಹೆಸರು ಅಂತಿಮ ಮಾಡಲಿದ್ದಾರೆ.

ಅಲ್ಲದೇ ಈ ನಿಯಮದ ಪ್ರಕಾರ ಇನ್ನು ಮುಂದೆ ಹಿಂದಿನಂತೆ ಬೇಕಾಬಿಟ್ಟಿ ಗೌರವ ಡಾಕ್ಟರೇಟ್ ನೀಡುವಂತಿಲ್ಲ. ಡಾಕ್ಟರೇಟ್ ಪಡೆವ ಗಣ್ಯರ ಹೆಸರನ್ನು ವಿವಿಗಳು ಅಂತಿಮಗೊಳಿಸುವಂತಿಲ್ಲ. ಸಿಂಡಿಕೇಟ್ ಮಂಡಳಿಯ ಸದಸ್ಯರು ಗೌರವ ಡಾಕ್ಟರೇಟ್‍ಗೆ ಆಯ್ಕೆ ಮಾಡಿದ ಹೆಸರನ್ನು ರಾಜಭವನಕ್ಕೆ ಕಳುಹಿಸಬೇಕು. ತದ ನಂತರ ಸಮಿತಿ ಈ ಕುರಿತಾಗಿ ಪರಿಶೀಲನೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಎನ್ನಲಾಗಿದೆ.

ಅಲ್ಲದೇ ಪ್ರಸ್ತುತ ಇರುವ ಡಾಕ್ಟರೇಟ್ ಆಯ್ಕೆ ಪ್ರಕ್ರಿಯೆ ಕುರಿತಾಗಿ ಕಿಡಿ ಕಾರಿರುವ ರಾಜ್ಯಪಾಲ ವಿ.ಆರ್. ವಾಲಾ ಬೇಕಾಬಿಟ್ಟಿ ಹಂಚಲಾಗುತ್ತಿದ್ದ ಗೌರವ ಡಾಕ್ಟರೇಟ್ ಗೆ ಕಡಿವಾಣ ಹಾಕುವ ಜತೆಗೆ ಹೊಸ ಮಾರ್ಗಸೂಚಿ ಅನುಸರಿಸುವಂತೆ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಸದ್ಯದಲ್ಲಿಯೇ ಸುತ್ತೋಲೆ ಹೊರಡಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...