alex Certify
ಕನ್ನಡ ದುನಿಯಾ       Mobile App
       

Kannada Duniya

ಬಹುಮತ ಸಾಬೀತುಪಡಿಸಿದ ಕುಮಾರಸ್ವಾಮಿ : ವಾಕ್ ಔಟ್ ಮಾಡಿದ ಬಿಜೆಪಿ

ನೂತನ ಸಿಎಂ ಕುಮಾರಸ್ವಾಮಿ ಮತ್ತೊಂದು ಗೆಲುವು ಸಾಧಿಸಿದ್ದಾರೆ. ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕುಮಾರಸ್ವಾಮಿ ವಿಶ್ವಾಸ ಮತಯಾಚನೆಗೆ ಮುಂದಾದ್ರೆ ಬಿಜೆಪಿ ಸದಸ್ಯರು ಸದನದಿಂದ ಹೊರ ನಡೆದಿದ್ದರು.

ವಿಶ್ವಾಸ ಮತಯಾಚನೆಗೂ ಮುನ್ನ ಸದನದಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಜನಾದೇಶ ಬಿಜೆಪಿ ಪರವಾಗಿರಲಿಲ್ಲ. ಈ ಬಾರಿ ಕೂಡ 2004ರ ಜನಾದೇಶವೇ ಬಂದಿದೆ. ಆ ವರ್ಷ ನಾನು ಮೊದಲ ಬಾರಿ ಶಾಸಕನಾಗಿದ್ದೆ. ಕಲಾಪವನ್ನು ವೀಕ್ಷಣೆ ಮಾಡ್ತಿದ್ದೆ ಎಂದ್ರು. ಉಪ ಮುಖ್ಯಮಂತ್ರಿ ಪರಮೇಶ್ವರ್, ಮಾಜಿ ಸಿಎಂ ಸಿದ್ಧರಾಮಯ್ಯ ಹಾಗೂ ಗುಲಾಂ ನಬಿ ಆಜಾದ್ ಗೆ ಕುಮಾರಸ್ವಾಮಿ ಧನ್ಯವಾದ ಹೇಳಿದ್ರು.

ಮತ ಎಣಿಕೆ ದಿನ ಮೊದಲ ಬಾರಿ ಪರಮೇಶ್ವರ್ ನನಗೆ ಕರೆ ಮಾಡಿದ್ದರು. ನಂತ್ರ ಆಜಾದ್ ನನ್ನ ಜೊತೆ ಮಾತನಾಡಿದ್ದರು. ಎರಡೂ ಪಕ್ಷ ಒಂದಾಗಿ ಸರ್ಕಾರ ರಚನೆ ಮಾಡೋಣ ಎಂದು ಅವ್ರು ಹೇಳಿದ್ರು. ನಾನು ಕಾಂಗ್ರೆಸ್ ಪರ ಒಲವು ತೋರಿದೆ. ಸಿಎಂ ಆಗುತ್ತೇನೆಂಬ ಆಸೆಗೆ ಕಾಂಗ್ರೆಸ್ ಜೊತೆ ಕೈ ಜೋಡಿಸಿಲ್ಲ. ಎಲ್ಲರ ಮುಂದೆ ಇದನ್ನು ಸ್ಪಷ್ಟಪಡಿಸುತ್ತೇನೆ. ಪ್ರಧಾನಿ ಮೋದಿ, ಬಿಜೆಪಿ ಹೊರತು ಯಾವ ಸರ್ಕಾರವೂ ರಚನೆಯಾಗಲು ಸಾಧ್ಯವಿಲ್ಲ ಎಂದಿದ್ದರು. ಅದನ್ನು ಸುಳ್ಳು ಮಾಡಲು ನಾನು ಸಿಎಂ ಆದೆ. ಪ್ರಜಾಪ್ರಭುತ್ವದ ಪೋಷಕರಾಗಿರುವ ಅವ್ರೇ ಹೀಗೆ ಮಾತನಾಡುವುದು ಎಷ್ಟು ಸರಿ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಇದಕ್ಕೂ ಮೊದಲು ಸ್ಪೀಕರ್ ಆಗಿ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಕುಮಾರ್ ಅವ್ರನ್ನು ಆಯ್ಕೆ ಮಾಡಲಾಯ್ತು. ರಮೇಶ್ ಕುಮಾರ್ ಸ್ಪೀಕರ್ ಆಗಿ ಆಯ್ಕೆಯಾಗ್ತಿದ್ದಂತೆ ಕುಮಾರಸ್ವಾಮಿ ಅವ್ರಿಗೆ ಧನ್ಯವಾದ ಹೇಳಿದ್ರು. ರಮೇಶ್ ಕುಮಾರ್ ಅನುಭವ ಸದನಕ್ಕೆ ಲಾಭ ತರಲಿದೆ ಎಂದ್ರು.

ನಂತ್ರ ಕುಮಾರಸ್ವಾಮಿ ಸದನದ ನಿಯಮದಂತೆ ವಿಶ್ವಾಸಮತ ಯಾಚನೆ ಮಾಡಿದ್ರು. ಬಿಜೆಪಿ ಶಾಸಕರ ಗೈರು ಹಾಜರಿಯಲ್ಲಿಯೇ ವಿಶ್ವಾಸಮತ ಸಾಬೀತು ಪಡಿಸುವಲ್ಲಿ ಕುಮಾರಸ್ವಾಮಿ ಯಶಸ್ವಿಯಾದ್ರು.

ಈ ಮಧ್ಯೆ ಮಾಜಿ ಸಿಎಂ ಯಡಿಯೂರಪ್ಪ ಕುಮಾರಸ್ವಾಮಿಗೆ ಸವಾಲೆಸೆದಿದ್ದಾರೆ. 24 ಗಂಟೆಯಲ್ಲಿ ರೈತರ ಸಾಲ ಮನ್ನಾ ಮಾಡದೆ ಹೋದಲ್ಲಿ ಸೋಮವಾರದಿಂದ ಪ್ರತಿಭಟನೆ ನಡೆಸುವುದಾಗಿ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...