alex Certify
ಕನ್ನಡ ದುನಿಯಾ       Mobile App
       

Kannada Duniya

ಹೊರ ಬರ್ತಲೇ ಇದೆ ಬಿಜೆಪಿ ನಾಯಕರ ಆಡಿಯೋ ಕ್ಲಿಪ್

ವಿಶ್ವಾಸಮತ ಯಾಚನೆಗೆ ಕ್ಷಣಗಣನೆ ಆರಂಭವಾಗಿದೆ. ಯಡಿಯೂರಪ್ಪ ಖುರ್ಚಿ ಉಳಿಸಿಕೊಳ್ತಾರಾ ಎಂಬ ಪ್ರಶ್ನೆಗೆ ಇನ್ನು ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ. ಈ ಮಧ್ಯೆ ಬಿಜೆಪಿ ನಾಯಕರ ಆಮಿಷದ ಒಂದೊಂದೆ ಆಡಿಯೋ ಬಿಡುಗಡೆಯಾಗ್ತಿದೆ.

ಜನಾರ್ದನರೆಡ್ಡಿ ಆಡಿಯೋ ನಂತ್ರ ವಿಜಯೇಂದ್ರ ಹಾಗೂ ಶಾಸಕರ ಪತ್ನಿ ಮಾತುಕತೆ ಆಡಿಯೋ ಬಿಡುಗಡೆಯಾಯ್ತು. ಈಗ ಯಡಿಯೂರಪ್ಪ ಆಡಿಯೋ ಕ್ಲಿಪ್ ಬಿಡುಗಡೆಯಾಗಿದೆ. ಯಡಿಯೂರಪ್ಪ, ಹಿರೇಕೆರೂರು ಶಾಸಕ ಬಿ.ಸಿ. ಪಾಟೀಲ್ ರಿಗೆ ಕರೆ ಮಾಡಿ ಆಮಿಷವೊಡ್ಡಿದ್ದಾರೆ ಎನ್ನಲಾಗ್ತಿದೆ.

ನಿಮಗೆ ಬೇಕಾದ ಸ್ಥಾನ ನೀಡುತ್ತೇವೆ. ನಮ್ಮ ಜೊತೆ ಬನ್ನಿ. ನಿಮ್ಮ ಜೊತೆ ಬೇರೆ ಶಾಸಕರನ್ನು ಕರೆತನ್ನಿ ಎಂದು ಯಡಿಯೂರಪ್ಪ ಹೇಳಿದ್ದಾರೆ. ಆಡಿಯೋದಲ್ಲಿ ಯಡಿಯೂರಪ್ಪ ಧ್ವನಿ ಸ್ಪಷ್ಟವಾಗಿ ಕೇಳ್ತಿಲ್ಲ. ಹಾಗಾಗಿ ಇದು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ವಿಜಯೇಂದ್ರ ಕೂಡ ಕಾಂಗ್ರೆಸ್ ಶಾಸಕ ಹೆಬ್ಬಾರ್ ಪತ್ನಿ ಜೊತೆ ಮಾತನಾಡಿದ್ದಾರೆ. ಅದ್ರ ಆಡಿಯೋ ಬಿಡುಗಡೆಯಾಗಿದೆ. ಸಚಿವ ಸ್ಥಾನ ಅಥವಾ ಹಣ ನೀಡುವುದಾಗಿ ವಿಜಯೇಂದ್ರ ಹೇಳುತ್ತಾರೆ. ಮಗನ ಭವಿಷ್ಯದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದಾದ್ರೆ ಪತಿ ಜೊತೆ ಮಾತನಾಡುತ್ತೇನೆಂದು ಶಾಸಕರ ಪತ್ನಿ ಹೇಳುವ ಆಡಿಯೋ ಇದಾಗಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...