alex Certify
ಕನ್ನಡ ದುನಿಯಾ       Mobile App
       

Kannada Duniya

ಭೂ ಕುಸಿತಕ್ಕೆ ನಲುಗಿದ ಹೆಬ್ಬಟ್ಟಗೇರಿಯಲ್ಲಿರೋದು ವೃದ್ದ ಮಾತ್ರ

ಕೊಡಗು ಜಿಲ್ಲೆಯಲ್ಲಿ ಬಿದ್ದ ಮಳೆ ಹಾಗೂ ಭೂ ಕುಸಿತ ಜನರ ನಿದ್ದೆಗೆಡಿಸಿದೆ. ಮಡಿಕೇರಿಯಿಂದ ಸುಮಾರು 7 ಕಿಲೋ ಮೀಟರ್ ದೂರದಲ್ಲಿರುವ ಹೆಬ್ಬಟ್ಟಗೇರಿ ಗ್ರಾಮದಲ್ಲಿ ಈಗ ನೀರವ ಮೌನ ಆವರಿಸಿದೆ. ಎರಡು ವಾರದ ಹಿಂದೆ 400 ಮನೆಗಳನ್ನು ಹೊಂದಿದ್ದ ಗ್ರಾಮದಲ್ಲಿ, ಈಗ ಸುಸ್ಥಿತಿಯಲ್ಲಿ ಉಳಿದೋರೋದು ಒಂದೇ ಮನೆ.

ಭೂ ಕುಸಿತ ಹಾಗೂ ಮಳೆಯ ಆರ್ಭಟಕ್ಕೆ ಹೆಬ್ಬಟ್ಟಗೇರಿ ಗ್ರಾಮದ ಸುಮಾರು 55 ಮನೆಗಳು ಸಂಪೂರ್ಣ ನಾಶವಾಗಿವೆ. ಉಳಿದ ಮನೆಗಳು ವಾಸ್ತವ್ಯಕ್ಕೆ ಯೋಗ್ಯವಿಲ್ಲ. ಈ ಗ್ರಾಮದ ಜನರೆಲ್ಲರೂ ಗಂಜಿ ಕೇಂದ್ರ ಹಾಗೂ ನೆಂಟರ ಮನೆಗಳತ್ತ ಮುಖ ಮಾಡಿದ್ರೆ, 68 ವರ್ಷದ ಗಣಪತಿ ಎಂಬವರು ಮಾತ್ರ ಗ್ರಾಮದಲ್ಲಿ ಉಳಿದುಕೊಂಡಿದ್ದಾರೆ.

ಭೂ ಕುಸಿತ ಹಾಗೂ ಮಳೆಗೆ ಊರಿನ ಜನರೆಲ್ಲಾ ಊರು ಬಿಟ್ಟರೆ, ಇವರೊಬ್ಬರೇ ಈ ಗ್ರಾಮದಲ್ಲಿ ವಾಸವಾಗಿದ್ದಾರೆ. ಭೂ ಕುಸಿತ ಹಾಗೂ ಮಳೆಯ ಪರಿಣಾಮ, ಗ್ರಾಮದ ಸುತ್ತ 3 ಕಿಲೋಮೀಟರ್ ವ್ಯಾಪ್ತಿಯಲ್ಲಿ ಅರಣ್ಯ ನಾಶವಾಗಿದೆ.

ಆಗಸ್ಟ್ 14 ರಂದು ಕೊಡಗಿನಲ್ಲಿ ಭೂ ಕುಸಿತ ಹಾಗೂ ಮಳೆಯ ಆರ್ಭಟ ಜೋರಾಗಿತ್ತು. ಹೆಬ್ಬಟ್ಟಗೇರಿ ಗ್ರಾಮದ ಜನ ಮನೆ ಬಿಟ್ಟು ಸುರಕ್ಷಿತ ಸ್ಥಳಗಳತ್ತ ಮುಖ ಮಾಡಿದ್ರು. ಆಗ ಗಣಪತಿ ಅವರಿಗೂ ಮನೆ ಬಿಡಲು ತಿಳಿಸಿದ್ರು. ಸಂಬಂಧಿಗಳು ಗಣಪತಿ ಅವರ ಮನವೊಲಿಸಲು ಶತ ಪ್ರಯತ್ನ ನಡೆಸಿದ್ರು ಫಲ ಸಿಗಲಿಲ್ಲ.

ಗಣಪತಿಯವರು ಜೀವನ ನಿರ್ವಹಣೆಗಾಗಿ ಇಟ್ಟುಕೊಂಡಿದ್ದ, ಮೂರು ಎಕರೆ ಕೃಷಿ ಭೂಮಿ ಸರ್ವನಾಶವಾಗಿದೆ. ಈ ಗ್ರಾಮದಲ್ಲಿ ಮತ್ತೊಮ್ಮೆ ಭೂ ಕುಸಿತವಾಗಿದ್ದು, ಗಣಪತಿಯವರ ಮನೆಯ ಪಕ್ಕದಲ್ಲೇ ಇದು ಸಂಭವಿಸಿದೆ. ಈ ಗ್ರಾಮದ ಜನರು ಸಾಕು ಪ್ರಾಣಿಗಳು, ವಾಹನಗಳ ಸಮೇತ ಗ್ರಾಮವನ್ನು ಬಿಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...