alex Certify ಕರ್ನಾಟಕದಲ್ಲಿನ ಈ ಊರುಗಳ ವಿಶೇಷತೆಗಳ ಕುರಿತು ನೀವೂ ತಿಳಿದುಕೊಳ್ಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರ್ನಾಟಕದಲ್ಲಿನ ಈ ಊರುಗಳ ವಿಶೇಷತೆಗಳ ಕುರಿತು ನೀವೂ ತಿಳಿದುಕೊಳ್ಳಿ

Channapatna, Bangaloreರಾಜ್ಯದಲ್ಲಿರುವ ಊರುಗಳಿಗೆ ತನ್ನದೇ ಆದ ಐತಿಹ್ಯ, ಹಿನ್ನೆಲೆ ಇದೆ. ಕೆಲವು ಊರುಗಳು ತಿಂಡಿ ತಿನಿಸುಗಳಿಗೆ ಫೇಮಸ್ ಆದರೆ, ಮತ್ತೆ ಕೆಲವು ವಿವಿಧ ಪರಿಕರಗಳಿಗೆ ಹೆಸರು ವಾಸಿಯಾಗಿವೆ. ಹೀಗೆ ಯಾವ ಊರುಗಳ ಜೊತೆಯಲ್ಲಿ ಏನೇನು ಜೊತೆಯಾಗಿದೆ ಎಂಬುದನ್ನು ನೋಡೋಣ ಬನ್ನಿ,

ಸೀರೆಗೆ ಮೈಸೂರು ಸಿಲ್ಕ್, ಮೊಳಕಾಲ್ಮೂರು, ಇಳಕಲ್ ಫೇಮಸ್, ಕರದಂಟು ತಿನ್ನಲು ಅಮೀನಗಡ ಹಾಗೂ ಗೋಕಾಕ್ ಹೆಸರು ವಾಸಿಯಾಗಿವೆ. ಕುಂದಾಪುರ ಹಾಗೂ ಮೈಸೂರು ಮಲ್ಲಿಗೆ, ಕೋಲಾರ ಚಿಂತಾಮಣಿಯ ಹುರಿಗಾಳು, ಬೆಳಗಾವಿಯ ಕುಂದಾ, ಗಂಗಾವತಿಯ ಭತ್ತ, ಮಂಡ್ಯ ಬೆಣ್ಣೆ, ಮಂಗಳೂರು ಹಾಗೂ ಮಾಲೂರಿನ ಹೆಂಚು, ಮಾವಿನಕುರ್ವೆ ಬೀಗಗಳು, ಮಂಗಳೂರು ಬೀಡಿ, ನಂಜನಗೂಡು ಹಲ್ಲಿನಪುಡಿ, ಶಹಬಾದ್ ನೆಲಹಾಸು ಕಲ್ಲುಗಳು, ಶಿವಾರಪಟ್ಟಣ ಶಿಲ್ಪಗಳು, ಚನ್ನಪಟ್ಟಣ ಗೊಂಬೆಗಳಿಗೆ ಹೆಸರುವಾಸಿಯಾಗಿವೆ.

ನಾಯಿಗಳಿಗೆ ಮುಧೋಳ, ಎಮ್ಮೆಗಳಿಗೆ ಧಾರವಾಡ, ಪೇಡಾಕ್ಕೆ ಧಾರವಾಡ, ಕುರಿಗಳಿಗೆ ಬನ್ನೂರು, ಹಸು (ಅಮೃತಮಹಲ್) ಮೈಸೂರು, ಮೆಣಸಿನಕಾಯಿಗೆ ಬ್ಯಾಡಗಿ, ತೆಂಗಿನಕಾಯಿಗೆ ತಿಪಟೂರು, ಕಿತ್ತಳೆಗೆ ಕೊಡಗು, ರಸಬಾಳೆಗೆ ನಂಜನಗೂಡು, ದಾಳಿಂಬೆಗೆ ಮಧುಗಿರಿ ಸಖತ್ ಫೇಮಸ್ ಆಗಿವೆ.

ದೇವನಹಳ್ಳಿ ಚಕ್ಕೋತ, ನಾಗಮಂಗಲ ಹಿತ್ತಾಳೆ ಪಾತ್ರೆಗಳು, ಕಲಘಟಗಿ ಮರದ ತೊಟ್ಟಿಲು, ದಾವಣಗೆರೆ ಬೆಣ್ಣೆದೋಸೆ, ಕುಂದರಗಿ ಕಂಬಳಿ, ಕುಣಿಗಲ್ ಕುದುರೆ, ಕಿನ್ನಾಳದ ಬಣ್ಣದ ಗೊಂಬೆ, ಸಾಗರ ಕೆತ್ತನೆ ಶ್ರೀಗಂಧ, ರಾಮನಗರ ರೇಷ್ಮೆ, ವಿಜಯಪುರ ದ್ರಾಕ್ಷಿ, ಕೊಲ್ಹಾರದ ಮೊಸರು, ಭದ್ರಾವತಿ ಕಬ್ಬಿಣ, ಕೊಡಗಿನ ಕಾಫಿ, ಕಾರವಾರ ಮೀನು, ರಾಯಚೂರು ರೊಟ್ಟಿ, ಕಲಬುರಗಿ ತೊಗರಿ, ಶಿವಮೊಗ್ಗ ಅಡಿಕೆ, ತುಮಕೂರು, ಬಿಡದಿಯ ತಟ್ಟೆ ಇಡ್ಲಿಗೆ ನೀವು ಮನಸೋಲದೇ ಇರಲಾರಿರಿ. ಹೇಗಿದೆ ಕರ್ನಾಟಕದ ಸ್ಥಳಗಳ ಹೆಸರಿನ ಜೊತೆಗಿನ ಹಿನ್ನೆಲೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...