alex Certify
ಕನ್ನಡ ದುನಿಯಾ       Mobile App
       

Kannada Duniya

ಮತದಾರರಿಗೆ ನೆರವಾಗಲಿದೆ ಈ ನಾಲ್ಕು ಆಪ್

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ರಾಜಕೀಯ ನಾಯಕರ ಮತಬೇಟೆ ವೇಗ ಪಡೆದಿದೆ. ಚುನಾವಣಾ ಆಯೋಗ ಮತದಾನಕ್ಕೆ ಎಲ್ಲ ಸಿದ್ಧತೆ ನಡೆಸುತ್ತಿದೆ. ಇತ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೂಡ ಮತದಾರರ ನೆರವಿಗೆ ಧಾವಿಸುತ್ತಿದೆ. ಮತದಾರರಿಗೆ ಚುನಾವಣೆ ಬಗ್ಗೆ ಎಲ್ಲ ರೀತಿಯ ಮಾಹಿತಿ ನೀಡಲು ತಂತ್ರಜ್ಞಾನದ ಮೊರೆ ಹೋಗಿದೆ.

ಮತದಾರರಿಗೆ ಮಾಹಿತಿ ನೀಡಲು ಬಿಬಿಎಂಪಿ ನಾಲ್ಕು ಮೊಬೈಲ್ ಆ್ಯಪ್ ಗಳನ್ನು ಸಿದ್ಧಪಡಿಸಲಾಗಿದೆ. ಮತದಾರರು ಈ ಆ್ಯಪ್ ಸಹಾಯ ಪಡೆಯಲಿದ್ದಾರೆ ಜೊತೆಗೆ ಬೇರೆಯವರಿಗೆ ಈ ಆ್ಯಪ್ ಬಗ್ಗೆ ಮಾಹಿತಿ ನೀಡಲಿದ್ದಾರೆಂದು ಬಿಬಿಎಂಪಿ ಬಲವಾಗಿ ನಂಬಿದೆ. ಚುನಾವಣೆ ವೇಳೆ ಮತದಾರರಿಗೆ ಯಾವುದೇ ತೊಂದರೆ ಆಗದಿರಲಿ ಎನ್ನುವ ಕಾರಣಕ್ಕೆ ಆ್ಯಪ್ ಸಿದ್ಧಪಡಿಸಲಾಗಿದೆ.

ಜನರಲ್ ಎಲೆಕ್ಷನ್ ಕ್ವಿಝ್ ಆ್ಯಪ್ : ಈ ಆ್ಯಪ್ ನಲ್ಲಿ ನಾಗರಿಕರಿಗೆ 10 ಪ್ರಶ್ನೆಗಳನ್ನು ಕೇಳಲಾಗುವುದು. ಹೆಚ್ಚು ಸರಿ ಉತ್ತರ ನೀಡಿದವರಿಗೆ ಆನ್ಲೈನ್ ಸರ್ಟಿಫಿಕೇಟ್ ನೀಡಲಾಗುವುದು.

ಎಲೆಕ್ಷನ್ ಡೈರೆಕ್ಷನ್ ಆ್ಯಪ್ :ಈ ಆ್ಯಪ್ ಮೂಲಕ ನೀವು ಚುನಾವಣಾ ಅಧಿಕಾರಿ ಮತ್ತು ಮತಗಟ್ಟೆ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ. ಮತಗಟ್ಟೆ ಎಲ್ಲಿದೆ ಎಂಬುದು ತಿಳಿಯದೆ ಹೋದ್ರೆ ಅಧಿಕಾರಿಯನ್ನು ಈ ಆ್ಯಪ್ ಮೂಲಕ ಸಂಪರ್ಕಿಸಬಹುದಾಗಿದೆ.

ಮಾಡಲ್ ಕೋಡ್ ಆಫ್ ಕಂಡಕ್ಟ್ ಆ್ಯಪ್ :ನಾಗರಿಕರು ಅಥವಾ ಪಕ್ಷದ ಸದಸ್ಯರು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗಿರುವ ಬಗ್ಗೆ ಇದ್ರಲ್ಲಿ ದೂರು ನೀಡಬಹುದಾಗಿದೆ. ಆಡಿಯೋ ಹಾಗೂ ವಿಡಿಯೋ ಅಪ್ಲೋಡ್ ಮಾಡುವ ವ್ಯವಸ್ಥೆ ಇದ್ರಲ್ಲಿದೆ.

ಪೋಲಿಂಗ್ ಸ್ಟೇಷನ್ ನೇವಿಗೇಟ್ ಆ್ಯಪ್ : ಮತಗಟ್ಟೆ ಎಲ್ಲಿದೆ? ಹೇಗೆ ಹೋಗಬೇಕು ಎಂಬ ಬಗ್ಗೆ ಈ ಆ್ಯಪ್ ನಲ್ಲಿ ತಿಳಿಯಬಹುದಾಗಿದೆ. ಮತಗಟ್ಟೆಗೆ ಹೋಗುವ ದಾರಿಯನ್ನು ಈ ಆ್ಯಪ್ ಹೇಳಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...