alex Certify
ಕನ್ನಡ ದುನಿಯಾ       Mobile App
       

Kannada Duniya

ಕೈನ 4 ಶಾಸಕರು ನಾಪತ್ತೆ: ಹುಡುಕಾಟಕ್ಕೆ ಹೆಲಿಕ್ಯಾಪ್ಟರ್ ಕಳುಹಿಸಿದ ಕಾಂಗ್ರೆಸ್

ಕರ್ನಾಟಕ ವಿಧಾನಸಭೆ ಚುನಾವಣೆ ಮುಕ್ತಾಯವಾಗಿದೆ. ಆದ್ರೆ ಹೈಡ್ರಾಮಾ ಮಾತ್ರ ಇನ್ನೂ ಮುಗಿದಿಲ್ಲ. ಯಾವುದೇ ಪಕ್ಷಕ್ಕೆ ಬಹುಮತ ಬಂದಿಲ್ಲ. ಕಾಂಗ್ರೆಸ್-ಜೆಡಿಎಸ್ ಒಂದಾಗಿ ಸರ್ಕಾರ ರಚನೆಗೆ ಮುಂದಾಗಿದೆ. ಇತ್ತ ಬಿಜೆಪಿ ಸರ್ಕಾರ ರಚನೆಗೆ ಶತ ಪ್ರಯತ್ನ ಮಾಡ್ತಿದೆ.

ಸರ್ಕಾರ ರಚನೆಗೆ ಮುಂದಾಗಿರುವ ಕಾಂಗ್ರೆಸ್-ಜೆಡಿಎಸ್, ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಯತ್ನ ನಡೆಸುತ್ತಿದೆ. ಶಾಸಕರು ಪಕ್ಷಾಂತರಗೊಳ್ಳದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕಾಂಗ್ರೆಸ್ ಶಾಸಕರಿಗಾಗಿ ರೆಸಾರ್ಟ್ ಬುಕ್ ಮಾಡಲಾಗಿದೆ. 120 ಕೊಠಡಿಗಳನ್ನು ಬುಕ್ ಮಾಡಲಾಗಿದೆ. ಪ್ರಮಾಣ ವಚನದವರೆಗೂ ಶಾಸಕರನ್ನು ರೆಸಾರ್ಟ್ ನಲ್ಲೇ ಹಿಡಿದಿಟ್ಟಿರುವ ಯತ್ನ ಮಾಡ್ತಿದೆ.

ನಾಲ್ಕು ಕಾಂಗ್ರೆಸ್ ಶಾಸಕರು ಪಕ್ಷದ ಸಂಪರ್ಕದಲ್ಲಿಲ್ಲ ಎಂಬ ಸುದ್ದಿ ಬಂದಿದೆ. ಮಂಗಳವಾರ ರಾತ್ರಿಯಿಂದಲೇ ಅವ್ರು ಸಂಪರ್ಕಕ್ಕೆ ಸಿಗ್ತಿಲ್ಲ. ಹಾಗಾಗಿ ಈ ಶಾಸಕರನ್ನು ಹುಡುಕಾಡಲು ಕಾಂಗ್ರೆಸ್ ಹೆಲಿಕ್ಯಾಪ್ಟರ್ ಬಳಸ್ತಿದೆ. ಬೀದರ್ ಹಾಗೂ ಕಲ್ಬುರ್ಗಿಗೆ ಹೆಲಿಕ್ಯಾಪ್ಟರ್ ಕಳುಹಿಸಿದೆ.

ಇದೇ ವೇಳೆ ಕಾಂಗ್ರೆಸ್ ಶಾಸಕಾಂಗ ಸಭೆಗೂ 12 ಶಾಸಕರು ಗೈರಾಗಿದ್ದಾರೆ. 78 ಶಾಸಕರ ಪೈಕಿ 66 ಶಾಸಕರು ಮಾತ್ರ ಸಭೆಗೆ ಬಂದಿದ್ದರು. ಬಿಜೆಪಿ ನಾಯಕರು ಬೆದರಿಸಿ, ಹಣದ ಆಮಿಷ ತೋರಿಸಿ ಶಾಸಕರನ್ನು ತಮ್ಮತ್ತ ಸೆಳೆಯುವ ಯತ್ನ ನಡೆಸುತ್ತಿದ್ದಾರೆಂದು ಕಾಂಗ್ರೆಸ್ ಆರೋಪ ಮಾಡಿದೆ.

 

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...