alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೊಂದು ಸಮೀಕ್ಷೆ: ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಗೊತ್ತಾ…?

ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಹಲವು ಸಮೀಕ್ಷೆಗಳನ್ನು ನಡೆಸಲಾಗಿದ್ದು, ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಅತಂತ್ರ ವಿಧಾನಸಭೆ ಫಲಿತಾಂಶದ ಬಗ್ಗೆ ಅಭಿಪ್ರಾಯ ವ್ಯಕ್ತವಾಗಿದೆ.

ಕೆಲವು ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್, ಮತ್ತೆ ಕೆಲವು ಸಮೀಕ್ಷೆಗಳ ಪ್ರಕಾರ ಬಿ.ಜೆ.ಪಿ. ಹೆಚ್ಚು ಸ್ಥಾನಗಳನ್ನು ಗಳಿಸಲಿದೆ. ಸ್ವತಂತ್ರವಾಗಿ ಅಧಿಕಾರ ರಚಿಸುವಷ್ಟು ಬಹುಮತ ಯಾವ ಪಕ್ಷಕ್ಕೂ ಬರುವುದಿಲ್ಲ. ಜೆ.ಡಿ.ಎಸ್. ಕಿಂಗ್ ಮೇಕರ್ ಆಗಲಿದೆ ಎಂದು ಹೇಳಲಾಗಿದೆ.

ಅತಂತ್ರ ಫಲಿತಾಂಶ ಸಾಧ್ಯಾಸಾಧ್ಯತೆ ಹಿನ್ನಲೆಯಲ್ಲಿ ರಾಜಕೀಯ ಪಕ್ಷಗಳು ಕಾರ್ಯತಂತ್ರವನ್ನು ಬದಲಿಸಿ ಪ್ರಚಾರ ನಡೆಸಿವೆ. ಸಿ.ಎಸ್.ಡಿ.ಎಸ್. –ಲೋಕನೀತಿಯಿಂದ ನಡೆಸಲಾದ ಮತದಾನ ಪೂರ್ವ ಸಮೀಕ್ಷೆಯಲ್ಲಿ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಆದರೆ, ದೊಡ್ಡ ಪಕ್ಷವಾದ್ರೂ ಕಾಂಗ್ರೆಸ್ ಗೆ ಅಧಿಕಾರ ರಚಿಸಲು ಸಾಧ್ಯವಾಗುವಷ್ಟು ಬಹುಮತ ಸಿಗುವುದಿಲ್ಲ.

ಸಿ.ಎಸ್.ಡಿ.ಎಸ್. –ಲೋಕನೀತಿ ಸಮೀಕ್ಷೆಯ ಪ್ರಕಾರ, ಕಾಂಗ್ರೆಸ್ -97, ಬಿ.ಜೆ.ಪಿ. -84, ಜೆ.ಡಿ.ಎಸ್. -37, ಇತರರು -04 ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...