alex Certify
ಕನ್ನಡ ದುನಿಯಾ       Mobile App
       

Kannada Duniya

‘ಅಪ್ಪ -ಮಕ್ಕಳಿಗೆ ಟಿಕೆಟ್ ಹೊಸದೇನಲ್ಲ’

ಬೆಂಗಳೂರು: ಅಪ್ಪ, ಮಕ್ಕಳು ಟಿಕೆಟ್ ಪಡೆದು ಚುನಾವಣೆಯಲ್ಲಿ ಸ್ಪರ್ಧಿಸುವುದು ಹೊಸದೇನಲ್ಲ. ಬೇರೆ ಪಕ್ಷಗಳಲ್ಲಿಯೂ ಅಪ್ಪ, ಮಕ್ಕಳು ಸ್ಪರ್ಧಿಸಿದ್ದಾರೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಕೆ.ಪಿ.ಸಿ.ಸಿ. ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಯನಗರ ನಾನು 4 ಸಲ ಗೆಲುವು ಕಂಡಿದ್ದ ಕ್ಷೇತ್ರವಾಗಿದೆ. ಆ ಕ್ಷೇತ್ರದಲ್ಲಿ ಪುತ್ರಿ ಸೌಮ್ಯ ಅವರಿಗೆ ಟಿಕೆಟ್ ಕೇಳಲಾಗಿದೆ. ಕೊಟ್ಟರೆ ಸಂತೋಷ ಎಂದು ಹೇಳಿದ್ದಾರೆ.

ನಮ್ಮ ಮಕ್ಕಳು ಎಂಬ ಕಾರಣಕ್ಕೆ ಟಿಕೆಟ್ ಕೇಳುತ್ತಿಲ್ಲ. ಗೆಲ್ಲುವ ಅರ್ಹತೆ ಇದ್ದರೆ ಕೊಡಲಿ, ಕೊಟ್ಟರೆ ಸಂತೋಷ ಪಡುತ್ತೇನೆ. ಸೌಮ್ಯ ಜಯನಗರದಲ್ಲಿ ಪಕ್ಷ ಸಂಘಟನೆಯಲ್ಲಿ ನಿರತರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ 3 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಸಮಸ್ಯೆ ಇಲ್ಲ. 1 ಕ್ಷೇತ್ರದ ಟಿಕೆಟ್ ಕುರಿತಾಗಿ ನಾಯಕರಾದ ಕೆ.ಹೆಚ್. ಮುನಿಯಪ್ಪ, ಸಿ.ಎಂ. ಸಿದ್ಧರಾಮಯ್ಯ ಹಾಗೂ ಪಕ್ಷದ ನಾಯಕರು ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...