alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಗ್ ಬ್ರೇಕಿಂಗ್! ಇಂದೇ ಚುನಾವಣೆ ಘೋಷಣೆ ಸಾಧ್ಯತೆ

ರಾಜ್ಯ ವಿಧಾನಸಭೆ ಚುನಾವಣೆಗೆ ಇಂದೇ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ. ರಾಜಕೀಯ ಪಕ್ಷಗಳು ಈಗಾಗಲೇ ಚುನಾವಣೆ ತಯಾರಿ ನಡೆಸಿದ್ದು, ಮುಂದಿನ ವಾರ ಚುನಾವಣೆ ಘೋಷಣೆಯಾಗಬಹುದೆಂದು ಹೇಳಲಾಗಿತ್ತು.

ಕೇಂದ್ರ ಚುನಾವಣಾ ಆಯೋಗ ಮೇ 5 ಅಥವಾ 7 ರಂದು ಚುನಾವಣೆ ನಡೆಸಲಿದ್ದು, ಮೇ 8 ಅಥವಾ 10 ರಂದು ಮತ ಎಣಿಕೆಗೆ ಸಿದ್ಧತೆ ಮಾಡಿಕೊಂಡಿದೆ. ಏಪ್ರಿಲ್ ಮೊದಲವಾರ ದಿನಾಂಕ ಘೋಷಿಸಲಿದೆ ಎನ್ನಲಾಗಿತ್ತು.

ಆದರೆ, ಇಂದೇ ದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರು ಸುದ್ದಿಗೋಷ್ಠಿಯನ್ನು ನಡೆಸಿ ಕರ್ನಾಟಕ ವಿಧಾನಸಭೆ ದಿನಾಂಕವನ್ನು ಪ್ರಕಟಿಸುವ ಸಾಧ್ಯತೆ ಇದೆ.

ಚುನಾವಣೆಗೆ ಆಯೋಗ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು, ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರು ರಾಜ್ಯಕ್ಕೆ ಆಗಮಿಸಿ, ಅಂತಿಮ ಹಂತದ ಸಿದ್ಧತೆ ಪರಿಶೀಲನೆ ನಡೆಸಿದ ಬಳಿಕ ಚುನಾವಣೆ ಘೋಷಿಸಲಿದ್ದಾರೆ ಎನ್ನಲಾಗಿತ್ತು.

ಆದರೆ, ರಾಜ್ಯಕ್ಕೆ ಭೇಟಿ ನೀಡುವ ಮೊದಲೇ ದಿನಾಂಕ ಘೋಷಣೆ ಮಾಡಲಾಗ್ತಿದೆ. ಇಂದೇ ವಿಧಾನಸಭೆ ಚುನಾವಣೆ ದಿನಾಂಕವನ್ನು ಘೋಷಿಸಲಾಗುವುದು. ಮೇ 2 ನೇ ವಾರ ಮತದಾನ ನಿಗದಿಯಾಗುವ ಸಾಧ್ಯತೆ ಇದೆ. ಇಂದು ಚುನಾವಣೆ ಘೋಷಣೆಯಾದಲ್ಲಿ ಇಂದಿನಿಂದಲೇ ನೀತಿ ಸಂಹಿತೆ ಜಾರಿಗೆ ಬರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...