alex Certify
ಕನ್ನಡ ದುನಿಯಾ       Mobile App
       

Kannada Duniya

ಹಯಾತ್ ಹೊಟೇಲ್ ನಿಂದ ತಾಜ್ ಕೃಷ್ಣಗೆ ಶಾಸಕರು ಶಿಫ್ಟ್

ರಾಜ್ಯ ರಾಜಕೀಯದ ಹೈಡ್ರಾಮಾ ಹೈದ್ರಾಬಾದ್ ತಲುಪಿದೆ. ಕಾಂಗ್ರೆಸ್-ಜೆಡಿಎಸ್ ತನ್ನ ಶಾಸಕರನ್ನು ರಕ್ಷಿಸಿಕೊಳ್ಳಲು ಶತ ಪ್ರಯತ್ನ ನಡೆಸ್ತಿದೆ. ನಿನ್ನೆ ರಾತ್ರಿಯೇ ಮೂರು ಬಸ್ ನಲ್ಲಿ ಬೆಂಗಳೂರು ಬಿಟ್ಟ ಶಾಸಕರು ಇಂದು ಬೆಳಿಗ್ಗೆ 9 ಗಂಟೆಗೆ ಹೈದ್ರಾಬಾದ್ ತಲುಪಿದ್ದಾರೆ. ಹೈದ್ರಾಬಾದ್ ನ ಹಯಾತ್ ಹೊಟೇಲ್ ನಲ್ಲಿ ಶಾಸಕರು ತಂಗಲಿದ್ದಾರೆ ಎನ್ನಲಾಗ್ತಿತ್ತು. ಆದ್ರೆ ಶಾಸಕರ ವಾಸದ ಸ್ಥಳ ಬದಲಾಗಿದೆ.

ಕಾಂಗ್ರೆಸ್-ಜೆಡಿಎಸ್ ನ ಎಲ್ಲ ಶಾಸಕರು ತಾಜ್ ಕೃಷ್ಣಗೆ ಶಿಫ್ಟ್ ಆಗಿದ್ದಾರೆ. ಎಲ್ಲ ಶಾಸಕರನ್ನು ತಾಜ್ ಕೃಷ್ಣಗೆ ಕಳುಹಿಸಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ. ಸಂಸದ ಡಿ.ಕೆ. ಸುರೇಶ್ ನೇತೃತ್ವದಲ್ಲಿ ಶಾಸಕರೆಲ್ಲರನ್ನೂ ತಾಜ್ ಕೃಷ್ಣಗೆ ಶಿಫ್ಟ್ ಮಾಡಲಾಗಿದೆಯಂತೆ. ಹಯಾತ್ ನಲ್ಲಿ ಹೆಚ್ಚಿನ ರೂಂ ಲಭ್ಯವಿರದ ಕಾರಣ ಶಾಸಕರು ತಾಜ್ ಕೃಷ್ಣಗೆ ತೆರಳಿದ್ದಾರೆ ಎನ್ನಲಾಗಿದೆ.

ಹೈದ್ರಾಬಾದ್ ಗೆ ಶಿಫ್ಟ್ ಆದ ಕಾಂಗ್ರೆಸ್ ಶಾಸಕರು ಹೊಸಬರಾಗಿದ್ದಾರೆ. ಹಿರಿಯ ಶಾಸಕರು ತಮ್ಮ ನಿವಾಸದಲ್ಲಿಯೇ ತಂಗಿದ್ದಾರೆ. ರಾಮಲಿಂಗ ರೆಡ್ಡಿ, ಶಾಮನೂರು ಶಿವಶಂಕರಪ್ಪ ಸೇರಿದಂತೆ ಹಿರಿಯ ಕಾಂಗ್ರೆಸ್ ಶಾಸಕರ ಮೇಲೆ ನಂಬಿಕೆ ಜಾಸ್ತಿಯಿದ್ದು, ಅವ್ರಿಗೆ ಮನೆಯಲ್ಲಿರಲು ಅನುಮತಿ ನೀಡಲಾಗಿದೆ.

ಹೈದ್ರಾಬಾದ್ ಗೆ ಹೋಗಿರುವ ಕಾಂಗ್ರೆಸ್-ಜೆಡಿಎಸ್ ಶಾಸಕರು ಬೇರೆ ಬೇರೆ ಹೊಟೇಲ್ ನಲ್ಲಿ ತಂಗಲಿದ್ದಾರೆ ಎಂಬ ಮಾತುಗಳೂ ಕೇಳಿ ಬರ್ತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...