alex Certify
ಕನ್ನಡ ದುನಿಯಾ       Mobile App
       

Kannada Duniya

ಬಿ.ಜೆ.ಪಿ.ಗೆ ಸರಳ ಬಹುಮತ, ಸುಳ್ಳಾದ ಸಮೀಕ್ಷೆ

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಮತದಾನ ಪೂರ್ವ ಮತ್ತು ಮತದಾನೋತ್ತರ ಸಮೀಕ್ಷೆಗಳಲ್ಲಿ ಅತಂತ್ರ ವಿಧಾನಸಭೆ ಫಲಿತಾಂಶದ ಬಗ್ಗೆ ಹೇಳಲಾಗಿತ್ತು. ಆದ್ರೆ, ಸಮೀಕ್ಷೆಗಳೇ ಅತಂತ್ರವಾಗಿವೆ.

ಅತಂತ್ರ ವಿಧಾನಸಭೆ ಫಲಿತಾಂಶ ಬರಲಿದೆ. ಜೆ.ಡಿ.ಎಸ್. ಕಿಂಗ್ ಮೇಕರ್ ಆಗಲಿದೆ ಎನ್ನಲಾಗಿತ್ತು. ನಿರೀಕ್ಷೆಯಂತೆಯೇ ಜೆ.ಡಿ.ಎಸ್. 40 ರ ಆಸುಪಾಸಿನಲ್ಲಿದೆ. ಬಿ.ಜೆ.ಪಿ. ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದು, ಆಡಳಿತಾರೂಢ ಕಾಂಗ್ರೆಸ್ ಗೆ ಭಾರೀ ಹಿನ್ನಡೆಯಾಗಿದೆ. ಅನೇಕ ಸಚಿವರು ಸೋಲು ಕಂಡಿದ್ದಾರೆ.

ಬಹುತೇಕ ಸಮೀಕ್ಷೆಗಳಲ್ಲಿ ಯಾವ ಪಕ್ಷಕ್ಕೂ ಬಹುಮತ ಬರುವುದಿಲ್ಲ ಎಂದು ಹೇಳಲಾಗಿತ್ತು. ಒಂದೆರಡು ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಇಲ್ಲವೇ ಬಿ.ಜೆ.ಪಿ. ದೊಡ್ಡ ಪಕ್ಷವಾಗಲಿದೆ. ಸರ್ಕಾರ ರಚನೆಗೆ ಜೆ.ಡಿ.ಎಸ್. ಬೆಂಬಲ ಅನಿವಾರ್ಯವೆಂದು ಹೇಳಲಾಗಿತ್ತು. ಎಲ್ಲಾ ಸಮೀಕ್ಷೆಗಳ ಲೆಕ್ಕಾಚಾರ ತಲೆ ಕೆಳಗಾಗಿದ್ದು, ಬಿ.ಜೆ.ಪಿ. ಬಹುಮತದತ್ತ ಮುನ್ನಡೆದಿದೆ.

ಸಮೀಕ್ಷೆಗಳೇ ಪರಮ ಸತ್ಯವಲ್ಲ, ಅವು ಆಯಾ ಸಂದರ್ಭಕ್ಕೆ ತಕ್ಕಂತೆ ಜನಾಭಿಪ್ರಾಯವಾಗಿರುತ್ತದೆ. ಅದು ಬದಲಾವಣೆಯಾಗುತ್ತಿರುತ್ತದೆ. ಈ ಚುನಾವಣೆಯಲ್ಲಿ ಸಮೀಕ್ಷೆಯ ಲೆಕ್ಕಾಚಾರಗಳೇ ಅತಂತ್ರವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...