alex Certify
ಕನ್ನಡ ದುನಿಯಾ       Mobile App
       

Kannada Duniya

ಮ್ಯಾಜಿಕ್ ನಂಬರ್ ದಾಟಿದ ಬಿ.ಜೆ.ಪಿ., ಈಶ್ವರಪ್ಪಗೆ ಭರ್ಜರಿ ಜಯ

ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಮುಂದುವರೆದಿದ್ದು, ಬಿ.ಜೆ.ಪಿ. 118 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ 66, ಜೆ.ಡಿ.ಎಸ್. 40, ಇತರರು 2 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಘೋಷಿತ ಫಲಿತಾಂಶದ ಪ್ರಕಾರ ಬಿ.ಜೆ.ಪಿ. 4, ಕಾಂಗ್ರೆಸ್ 1 ಕ್ಷೇತ್ರದಲ್ಲಿ ಗೆಲುವು ಕಂಡಿದೆ. ಮುನ್ನಡೆಯೇ ಅಂತಿಮ ಫಲಿತಾಂಶವಲ್ಲ. ಈ ಸಂಖ್ಯೆಗಳಲ್ಲಿ ಬದಲಾವಣೆಯಾಗಲಿದೆ.

ಕೊಳ್ಳೆಗಾಲದಲ್ಲಿ ಬಿ.ಎಸ್.ಪಿ.ಯ ಮಹೇಶ್ ಗೆಲುವು ಕಂಡಿದ್ದಾರೆ. ಸುಳ್ಯದಲ್ಲಿ ಬಿ.ಜೆ.ಪಿ. ಅಭ್ಯರ್ಥಿ ಅಂಗಾರ ಗೆಲುವು ಕಂಡಿದ್ದಾರೆ. ಬೊಮ್ಮನಹಳ್ಳಿಯಲ್ಲಿ ಬಿ.ಜೆ.ಪಿ.ಯ ಸತೀಶ್ ರೆಡ್ಡಿ ಗೆಲುವಿನತ್ತ ಸಾಗಿದ್ದಾರೆ.

ನಂಜನಗೂಡಿನಲ್ಲಿ ಶ್ರೀನಿವಾಸ ಪ್ರಸಾದ್ ಅಳಿಯ ಗೆಲುವು ಕಂಡಿದ್ದಾರೆ. ಉಪ ಚುನಾವಣೆಯಲ್ಲಿ ಜಯಿಸಿದ್ದ ಕಳಲೆ ಕೇಶವಮೂರ್ತಿ ಸೋಲಾಗಿದೆ.

ಶಿವಮೊಗ್ಗದಲ್ಲಿ ಕೆ.ಎಸ್. ಈಶ್ವರಪ್ಪ ಗೆಲುವು ಕಂಡಿದ್ದು, ಹೊಳಲ್ಕೆರೆಯಲ್ಲಿ ಸಚಿವ ಆಂಜನೇಯ ಸೋಲು ಕಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...