alex Certify
ಕನ್ನಡ ದುನಿಯಾ       Mobile App
       

Kannada Duniya

ಬಿ.ಜೆ.ಪಿ. ಟಿಕೆಟ್ ಆಕಾಂಕ್ಷಿಗಳಲ್ಲಿ ಟೆನ್ಷನ್, ಟೆನ್ಷನ್

ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ಹಾಗೂ ಕೆಲವರನ್ನು ಹೊರತುಪಡಿಸಿ ಬಿ.ಜೆ.ಪಿ.ಯಿಂದ ಯಾರಿಗೂ ಟಿಕೆಟ್ ಕನ್ಫರ್ಮ್ ಆಗಿಲ್ಲ.

ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆ ಬಿರುಸುಗೊಂಡಿವೆ. ಅಂತೆಯೇ ಬಿ.ಜೆ.ಪಿ.ಯಲ್ಲಿಯೂ ಚಟುವಟಿಕೆ ಜೋರಾಗಿದೆ. ಬಿ.ಜೆ.ಪಿ. ನಾಯಕರಲ್ಲಿ ಟಿಕೆಟ್ ಟೆನ್ಷನ್ ಜಾಸ್ತಿಯಾಗತೊಡಗಿದೆ. ಕೆಲವರಿಗೆ ಟಿಕೆಟ್ ಕನ್ಫರ್ಮ್ ಎಂದು ಹೇಳಲಾಗಿದ್ದರೂ, ಕೊನೆ ಕ್ಷಣದವರೆಗೂ ಏನೂ ಹೇಳುವಂತಿಲ್ಲ. ಕೆಲವರಿಗೆ ಟಿಕೆಟ್ ಸಿಗದಿರುವ, ಮತ್ತೆ ಕೆಲವರಿಗೇ ಕ್ಷೇತ್ರವೇ ಬದಲಾಗುವ ಸಾಧ್ಯತೆ ಇದೆ.

ಕುಮಾರ್ ಬಂಗಾರಪ್ಪ ಬಿ.ಜೆ.ಪಿ. ಸೇರ್ಪಡೆಯಾಗಿದ್ದರಿಂದ ಶಿವಮೊಗ್ಗ ಜಿಲ್ಲೆಯ ಸೊರಬ ಕ್ಷೇತ್ರದ ಬದಲಿಗೆ ಸಾಗರದಲ್ಲಿ ಹರತಾಳು ಹಾಲಪ್ಪ ಸ್ಪರ್ಧಿಸಲಿದ್ದಾರೆ ಎನ್ನಲಾಗಿತ್ತು. ಹರತಾಳು ಹಾಲಪ್ಪ ಅವರೇ ಅಭ್ಯರ್ಥಿ ಎಂದು ಬಿ.ಎಸ್.ವೈ. ಕೂಡ ಹೇಳಿದ್ದರು. ಆದರೆ, ಅಮಿತ್ ಶಾ ಅವರು ನಡೆಸಿದ ಪ್ರತ್ಯೇಕ ಸರ್ವೇ ಆಧಾರದಲ್ಲಿ ಬೇಳೂರು ಗೋಪಾಲಕೃಷ್ಣ ಅವರಿಗೆ ಸಾಗರದಲ್ಲಿ ಟಿಕೆಟ್ ಸಿಗುವ ಸಾಧ್ಯತೆ ಇದೆ. ಹೀಗಾಗಿ ಹಾಲಪ್ಪ ಕಾಂಗ್ರೆಸ್ ಸೇರಿ ಸೊರಬದಿಂದ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗಿದೆ.

ಬಿ.ಜೆ.ಪಿ. ಅಧ್ಯಕ್ಷ ಅಮಿತ್ ಶಾ ಏಪ್ರಿಲ್ ಮೊದಲವಾರ ಸರ್ವೇ ಆಧಾರದಲ್ಲಿ ಸರಣಿ ಸಭೆಗಳನ್ನು ನಡೆಸಿ ಅಭಿಪ್ರಾಯ ಸಂಗ್ರಹಿಸಿ, ಟಿಕೆಟ್ ಹಂಚಿಕೆ ಫೈನಲ್ ಮಾಡಲಿದ್ದಾರೆ. ಈಗಾಗಲೇ ಅಭ್ಯರ್ಥಿಗಳ ಪಟ್ಟಿ ರೆಡಿಯಾಗಿದ್ದು, ಹಲವು ನಾಯಕರಿಗೆ ಕ್ಷೇತ್ರ ಬದಲಾವಣೆಯಾಗಬಹುದಾಗಿದೆ ಎನ್ನಲಾಗಿದ್ದು, ಆಕಾಂಕ್ಷಿಗಳ ಒತ್ತಡ ಹೆಚ್ಚಾಗತೊಡಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...