alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ಕಾರ ರಚನೆಗೆ ಈ ಎಲ್ಲ ಪ್ಲಾನ್ ಮಾಡ್ತಿವೆ ಪಕ್ಷಗಳು

ರಾಜ್ಯ ರಾಜಕೀಯದಲ್ಲಿ ಕೆಸರೆರಚಾಟ ಮುಂದುವರೆದಿದೆ. ಬಿಜೆಪಿ ಆಪರೇಷನ್ ಕಮಲಕ್ಕೆ ಮುಂದಾದ್ರೆ ಕಾಂಗ್ರೆಸ್-ಜೆಡಿಎಸ್ ಕೂಡ ಆಪರೇಷನ್ ಶುರು ಮಾಡುತ್ತೆ ಎಂದು ನಾಯಕರು ಎಚ್ಚರಿಕೆ ನೀಡಿದ್ದಾರೆ. ಬಿಜೆಪಿಯಿಂದ ಶಾಸಕರನ್ನು ರಕ್ಷಿಸಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿವೆ. ಈಗಲ್ ಟನ್ ರೆಸಾರ್ಟ್ ಗೆ ಶಾಸಕರನ್ನು ಕಳುಹಿಸಲಾಗುತ್ತಿದೆ. ಜೊತೆಗೆ ಬಿಜೆಪಿ ಶಾಸಕರಿಗೆ ಗಾಳ ಹಾಕಲು ಜೆಡಿಎಸ್ ಮುಂದಾಗಿದೆ. ಬೇರೆ ರಾಜ್ಯಗಳ ಉದಾಹರಣೆ ತೋರಿಸಿ ನಮಗೆ ಸರ್ಕಾರ ರಚನೆಗೆ ಅವಕಾಶ ನೀಡಿ ಎಂದು ರಾಜ್ಯಪಾಲರ ಮುಂದೆ ಒತ್ತಡ ಹೇರಲು ಕಾಂಗ್ರೆಸ್-ಜೆಡಿಎಸ್ ಮುಂದಾಗಿದೆ.

ಇತ್ತ ಬಿಜೆಪಿ ಕೂಡ ಆಪರೇಷನ್ ಕಮಲ ಶುರು ಮಾಡಿದೆಯಂತೆ. ಮೈಸೂರು ಭಾಗದ ಅತೃಪ್ತ ಜೆಡಿಎಸ್ ಶಾಸಕರಿಗೆ ಗಾಳ ಹಾಕುತ್ತಿದೆಯಂತೆ. ಈಗಾಗಲೇ ಯಡಿಯೂರಪ್ಪ ಹಾಗೂ ಈಶ್ವರಪ್ಪ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎನ್ನಲಾಗ್ತಿದೆ. ಬಳ್ಳಾರಿ ಗಣಿದಣಿಗಳನ್ನು ನೆನಪಿಸಿಕೊಂಡಿರುವ ಅಮಿತ್ ಶಾ ಆಪ್ತ ಶಾಸಕರ ಮನವೊಲಿಸುವಂತೆ ಶ್ರೀರಾಮುಲುಗೆ ಹೇಳಿದ್ದಾರೆ ಎನ್ನಲಾಗಿದೆ. ಇನ್ನು ಹೈದ್ರಾಬಾದ್ ಕರ್ನಾಟಕದಲ್ಲೂ ಜೆಡಿಎಸ್ ನಾಯಕರು ಸಿಟ್ಟಿಗೆದ್ದಿದ್ದಾರೆ ಎನ್ನಲಾಗಿದೆ. ಅವ್ರ ಮೇಲೂ ಬಿಜೆಪಿ ಕಣ್ಣಿಟ್ಟಿದೆ.

ಬಿಜೆಪಿ ಬಿಟ್ಟು ಹೋದ ಶಾಸಕರು ಹಾಗೂ ಜೆಡಿಎಸ್ ಹಾಗೂ ಕಾಂಗ್ರೆಸ್ ಲಿಂಗಾಯಿತ ಶಾಸಕರನ್ನೂ ಯಡಿಯೂರಪ್ಪ ಸೆಳೆಯಲು ಯತ್ನ ಮಾಡ್ತಿದ್ದಾರಂತೆ.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...