alex Certify
ಕನ್ನಡ ದುನಿಯಾ       Mobile App
       

Kannada Duniya

ತನ್ನ ಜೊತೆ ದೋಣಿಯಲ್ಲಿದ್ದ 13 ಸಚಿವರನ್ನು ಮುಳುಗಿಸಿದ ಸಿದ್ಧರಾಮಯ್ಯ

ಸಿಎಂ ಸಿದ್ಧರಾಮಯ್ಯ ಭಾರೀ ಮುಖಭಂಗ ಎದುರಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ಸೋಲುಂಡಿದ್ದಾರೆ. ಬದಾಮಿಯಲ್ಲಿ ಗೆಲುವು ಸಾಧಿಸಿದ್ರೂ ಸಚಿವರನ್ನು ತಮ್ಮ ಜೊತೆ ಮುಳುಗಿಸಿದ್ದಾರೆ. ಯಸ್, ಸಿದ್ಧರಾಮಯ್ಯ ಕ್ಯಾಬಿನೆಟ್ ನಲ್ಲಿದ್ದ 13 ಸಚಿವರು ಸೋಲಿನ ಮುಖ ನೋಡಿದ್ದಾರೆ. ಇದು ಕರ್ನಾಟಕ ಜನರ ಕುತೂಹಲಕಾರಿ ನಡೆಯಾಗಿದ್ದು, ಜನ ಬುದ್ದಿ ಕಲಿತಿದ್ದಾರೆ ಎಂಬುದಕ್ಕೆ ಉತ್ತಮ ನಿದರ್ಶನವಾಗಿದೆ.

ಸಚಿವೆ ಉಮಾಶ್ರೀ, ಸಚಿವರಾದ ಸಂತೋಷ್ ಲಾಡ್, ಅಭಯ್ ಚಂದ್ರ ಜೈನ್, ವಿನಯ್ ಕುಲ್ಕರ್ಣಿ, ವಿನಯ್ ಕುಮಾರ್ ಸೊರಕೆ, ರಮಾನಾಥ ರೈ, ಬಸವರಾಜ್ ರಾಯರೆಡ್ಡಿ, ಜಯಚಂದ್ರ, ಹೆಚ್,ವೈ,ಮೇಟಿ, ಪ್ರಮೋದ್ ಮದ್ವರಾಜ್, ಗೀತಾ ಮಹದೇವ್ ಪ್ರಸಾದ್ ಸೋಲು ಕಂಡಿದ್ದಾರೆ.

ಅಧಿಕಾರಕ್ಕೆ ಬಂದ ನಂತ್ರ ಸಿದ್ಧರಾಮಯ್ಯ ಕೈಗೊಂಡ ವಿವಾದಾತ್ಮಕ ನಿರ್ಧಾರಗಳೇ ಈ ಸೋಲಿಗೆ ಕಾರಣ ಎನ್ನಲಾಗ್ತಿದೆ. ಸಿದ್ಧರಾಮಯ್ಯ ವಿವಾದಾತ್ಮಕ ನಿರ್ಧಾರದ ವಿರುದ್ಧ ಸಚಿವರು ದನಿ ಎತ್ತಲಿಲ್ಲ. ಸಿದ್ಧರಾಮಯ್ಯಗೆ ಸಂಪೂರ್ಣ ಬೆಂಬಲ ನೀಡಿ ಈಗ ಕಹಿಯುಂಡಿದ್ದಾರೆ.

ಸಿದ್ಧರಾಮಯ್ಯರ ನಿರ್ಧಾರ, ಮೊಂಡುತನ, ಪ್ರಚಾರದ ವೇಳೆ ಬಿಜೆಪಿ ವಿರುದ್ಧ ಮಾಡಿದ ಭ್ರಷ್ಟಾಚಾರ ಆರೋಪಗಳು ಸಿದ್ಧರಾಮಯ್ಯ ದೋಣಿ ಮುಳುಗಲು ಕಾರಣವಾಯ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...