alex Certify
ಕನ್ನಡ ದುನಿಯಾ       Mobile App
       

Kannada Duniya

40 ರೂ. ಬದಲು ಪಡೆಯಲಾಗಿತ್ತು 4 ಲಕ್ಷ ರೂ…!

swipe

ಮಂಗಳೂರಲ್ಲಿ ಟೋಲ್ ಸಿಬ್ಬಂದಿಯೊಬ್ಬ ಡೆಬಿಟ್ ಕಾರ್ಡ್ ಮೂಲಕ 40 ರೂಪಾಯಿ ಬದಲು 4 ಲಕ್ಷ ರೂಪಾಯಿ ಸ್ವೈಪ್ ಮಾಡಿದ್ದಾನೆ. ಉಡುಪಿ ಬಳಿಯ ಕೊಚ್ಚಿ-ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿರೋ ಗುಂಡ್ಮಿ ಟೋಲ್ ಬೂತ್ ನಲ್ಲಿ ಈ ಪ್ರಮಾದ ನಡೆದಿದೆ. ಈ ಟೋಲ್ ಗೇಟ್ ಉಡುಪಿಯಿಂದ 18 ಕಿ.ಮೀ. ದೂರದಲ್ಲಿದೆ.

ಮೈಸೂರು ಮೂಲದ ವೈದ್ಯರೊಬ್ಬರು ಇದೇ ಮಾರ್ಗವಾಗಿ 10.30 ರ ವೇಳೆಗೆ ಮುಂಬೈಗೆ ಹೊರಟಿದ್ರು. 40 ರೂಪಾಯಿ ಟೋಲ್ ಕಟ್ಟಲು ತಮ್ಮ ಡೆಬಿಟ್ ಕಾರ್ಡನ್ನು ಟೋಲ್ ಸಿಬ್ಬಂದಿಗೆ ಕೊಟ್ಟಿದ್ದಾರೆ. ಆತ ಕಾರ್ಡ್ ಸ್ವೈಪ್ ಮಾಡಿ ರಸೀದಿಯನ್ನು ವೈದ್ಯರಿಗೆ ಕೊಟ್ಟಿದ್ದ. ನಿಮ್ಮ ಅಕೌಂಟ್ ನಿಂದ 4 ಲಕ್ಷ ರೂಪಾಯಿ ಡೆಬಿಟ್ ಆಗಿದೆ ಅಂತಾ ಡಾಕ್ಟರ್ ಗೆ ಮೆಸೇಜ್ ಬಂತು.

ಅದನ್ನು ನೋಡಿ ಶಾಕ್ ಆದ ವೈದ್ಯರು ಟೋಲ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ರು. ಸಿಬ್ಬಂದಿ 40 ರೂಪಾಯಿ ಬದಲು 4 ಲಕ್ಷ ಸ್ವೈಪ್ ಮಾಡಿದ್ದಾನೆ, ನನ್ನ ಹಣವನ್ನು ಹಿಂತಿರುಗಿಸಿ ಅಂತಾ ಕೇಳಿದ್ರು. ಸುಮಾರು 2 ಗಂಟೆ ಕಾದ್ರೂ ಟೋಲ್ ಅಧಿಕಾರಿಗಳು ತಮ್ಮ ತಪ್ಪನ್ನು ಒಪ್ಪಿಕೊಳ್ಳಲೇ ಇಲ್ಲ. ನಂತರ ಅಲ್ಲಿಂದ 5 ಕಿ.ಮೀ. ದೂರದಲ್ಲಿರೋ ಕೋಟಾಗೆ ತೆರಳಿದ ಡಾಕ್ಟರ್ ರಾವ್, ಪೊಲೀಸರಿಗೆ ದೂರು ಕೊಟ್ರು.

ಹೆಡ್ ಕಾನ್ಸ್ ಟೇಬಲ್ ಜೊತೆಗೆ ಮತ್ತೆ ಟೋಲ್ ಬೂತ್ ಬಳಿ ಬಂದ್ರು. ಪೊಲೀಸರನ್ನು ಕಂಡ ಕೂಡಲೇ ಟೋಲ್ ಸಿಬ್ಬಂದಿ, ತನ್ನಿಂದಾದ ತಪ್ಪನ್ನು ಒಪ್ಪಿಕೊಂಡಿದ್ದಾನೆ. 4 ಲಕ್ಷ ರೂಪಾಯಿ ಚೆಕ್ ಕೊಡೋದಾಗಿ ಹೇಳಿದ್ದಾನೆ. ಆದ್ರೆ ವೈದ್ಯರು ಅದಕ್ಕೆ ಒಪ್ಪಲಿಲ್ಲ. ನಗದು ಮೂಲಕವೇ ಹಣ ಕೊಡುವಂತೆ ಹೇಳಿದ್ರು. ಬಳಿಕ ಬೆಳಿಗ್ಗೆ 4 ಗಂಟೆ ವೇಳೆಗೆ ಟೋಲ್ ಅಧಿಕಾರಿಗಳು ವೈದ್ಯರಿಗೆ 3,99,960 ರೂಪಾಯಿ ನಗದು ಕೊಟ್ಟು ಕಳುಹಿಸಿದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...