alex Certify
ಕನ್ನಡ ದುನಿಯಾ       Mobile App
       

Kannada Duniya

ಜೊತೆಗೆ ಬಂದ್ರೆ ರಾತ್ರಿಯಿಂದಲೇ ಬದಲಾಗುತ್ತೆ ಅದೃಷ್ಟ: ರೆಡ್ಡಿ ಆಡಿಯೋ ಕ್ಲಿಪ್ ನಲ್ಲೇನಿದೆ ಗೊತ್ತಾ?

ಕರ್ನಾಟಕದಲ್ಲಿ ಸರ್ಕಾರ ಉಳಿಸಿಕೊಳ್ಳುವ ಯತ್ನ ಮುಂದುವರೆದಿದೆ. ನಾಳೆ ಸಿಎಂ ಯಡಿಯೂರಪ್ಪ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕಿದೆ. ಈ ಮಧ್ಯೆ ಕಾಂಗ್ರೆಸ್, ಗಣಿಧಣಿ ಜನಾರ್ದನ ರೆಡ್ಡಿ ಆಡಿಯೋ ಕ್ಲಿಪ್ ಒಂದನ್ನು ಬಿಡುಗಡೆ ಮಾಡಿದೆ. ಈ ಕ್ಲಿಪ್ ನಲ್ಲಿ ಕಾಂಗ್ರೆಸ್ ಶಾಸಕರಿಗೆ ಜನಾರ್ದನ ರೆಡ್ಡಿ ಬಿಜೆಪಿಗೆ ಬರುವಂತೆ ಆಮಿಷವೊಡ್ಡುತ್ತಿದ್ದಾರೆ.

ರೆಡ್ಡಿ, ಕಾಂಗ್ರೆಸ್ ಶಾಸಕ ಬಸವನಗೌಡ ಜೊತೆ ಮಾತನಾಡಿದ ಆಡಿಯೋ ಇದಾಗಿದೆ. ಇಂದು ಮಧ್ಯರಾತ್ರಿಯಿಂದ ನಿಮ್ಮ ಅದೃಷ್ಟ ಬದಲಾಯ್ತು ಅಂದುಕೊಳ್ಳಿ. ಕೇಂದ್ರ ನಾಯಕರು ನಿಮ್ಮ ಜೊತೆ ನೇರವಾಗಿ ಮಾತನಾಡ್ತಾರೆ ಎಂದು ರೆಡ್ಡಿ ಆಡಿಯೋದಲ್ಲಿ ಹೇಳಿದ್ದಾರೆ.

ಪ್ಲೀಸ್ ಹಳೆ ಸಮಯ ಮರೆತುಬಿಡಿ. ಕೆಟ್ಟ ಸಮಯ ಕಳೆಯಿತು ಎಂದುಕೊಳ್ಳಿ. ನಿಮಗೆ ಯಾವ ಸಚಿವ ಸ್ಥಾನ ಬೇಕೆಂದು ನಮಗೆ ಹೇಳಿ. ನೀವು ದೊಡ್ಡ ವ್ಯಕ್ತಿಗಳ ಜೊತೆ ನೇರವಾಗಿ ಮಾತನಾಡಬಹುದು. ಅವ್ರು ನನ್ನ ಮಾತನ್ನು ತೆಗೆದು ಹಾಕುವುದಿಲ್ಲ. ಈಗ ಎಷ್ಟು ಗಳಿಸಿದ್ದಿರೋ ಅದ್ರ ನೂರು ಪಟ್ಟು ಮುಂದೆ ಗಳಿಸಬಹುದು ಎಂದು ರೆಡ್ಡಿ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಉಗ್ರಪ್ಪ ಈ ಆಡಿಯೋವನ್ನು ಜನತೆ ಮುಂದಿಟ್ಟಿದ್ದಾರೆ. ಆದ್ರೆ ಕಾಂಗ್ರೆಸ್ ಆರೋಪವನ್ನು ಬಿಜೆಪಿ ತಳ್ಳಿಹಾಕಿದೆ. ಶಾಸಕರನ್ನು ಕಳೆದುಕೊಳ್ಳುವ ಭಯದಲ್ಲಿರುವ ಕಾಂಗ್ರೆಸ್ ಸುಳ್ಳು ಆರೋಪ ಮಾಡ್ತಿದೆ ಎಂದು ಬಿಜೆಪಿ ದೂರಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...