alex Certify
ಕನ್ನಡ ದುನಿಯಾ       Mobile App
       

Kannada Duniya

ಚುನಾವಣೆಯೇ ಸಿದ್ದರಾಮಯ್ಯ ಬಜೆಟ್ ಟಾರ್ಗೆಟ್!

C M Siddaramaiah addressing during the Joint session at Vidhana Soudha in Bangalore on Thursday, January 23, 2014.

2018ರ ರಾಜ್ಯ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜನರನ್ನು ಓಲೈಸುವಂತಹ ಬಜೆಟ್ ಮಂಡನೆಗೆ ಸಿಎಂ ಸಿದ್ದರಾಮಯ್ಯ ತಯಾರಿ ಮಾಡಿಕೊಂಡಿದ್ದಾರೆ. ಇದನ್ನು ಸೂಚ್ಯವಾಗಿ ಅವರೇ ಹೇಳಿಕೊಂಡಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಗೆ ಸಿದ್ದರಾಮಯ್ಯ ಫಂಡ್ ಸಂಗ್ರಹಿಸಿ ಕೊಡ್ತಿದ್ದಾರೆ ಅಂತಾ ಬಿಜೆಪಿ ಮೇಲಿಂದ ಮೇಲೆ ಆರೋಪ ಮಾಡ್ತಾ ಇದೆ.

ಇದ್ರಿಂದ ತಮ್ಮ ಇಮೇಜ್ ಗೆ ಡ್ಯಾಮೇಜ್ ಆಗಬಹುದು ಅನ್ನೋದು ಸಿಎಂ ಅಳಲು. ಹಾಗಾಗಿ ಬಜೆಟ್ ನಲ್ಲಿ ಜನಪ್ರಿಯ ಘೋಷಣೆ ಮಾಡುವ ಮೂಲಕ ಈಗಿನಿಂದ್ಲೇ ಮತದಾರರ ಮನಗೆಲ್ಲಲು ಕಸರತ್ತು ಮಾಡಲಿದ್ದಾರೆ. ಮುಂದಿನ ತಿಂಗಳು ಬಜೆಟ್ ಮಂಡನೆಯಾಗಲಿದ್ದು, ಕರ್ನಾಟಕದಲ್ಲಿ 12ನೇ ಬಾರಿ ಆಯವ್ಯಯ ಮಂಡಿಸಿದ ಮೊದಲ ರಾಜಕಾರಣಿ ಎಂಬ ಗೌರವಕ್ಕೂ ಸಿದ್ದರಾಮಯ್ಯ ಪಾತ್ರರಾಗಲಿದ್ದಾರೆ.

ಬರಪೀಡಿತ ರೈತರಿಗೆ ಬಜೆಟ್ ನಲ್ಲಿ ನೆರವು ಘೋಷಿಸುವ ಸಾಧ್ಯತೆ ಇದೆ. ಶಿಕ್ಷಣ, ಮಹಿಳೆಯರ ಸುರಕ್ಷತೆ ಮತ್ತು ಯುವಕರಿಗೆ ಉದ್ಯೋಗ ನೀಡಲು ಹೊಸ ಯೋಜನೆಗಳನ್ನು ಪ್ರಕಟಿಸುವ ಸಾಧ್ಯತೆ ಹೆಚ್ಚಿದೆ. ಫೆಬ್ರವರಿ 27ರಿಂದ ಬಜೆಟ್ ಸಿದ್ಧತೆಗಾಗಿ ಎಲ್ಲಾ ಇಲಾಖೆಗಳೊಂದಿಗೆ ಸಿಎಂ ಚರ್ಚೆ ನಡೆಸಲಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...