alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜ್ಯದಲ್ಲಿ ಈವರೆಗೂ ಮುಖ್ಯಮಂತ್ರಿಗಳಾಗಿದ್ದವರು ಯಾರ್ಯಾರು ಗೊತ್ತಾ?

ಮೇ 12 ರಂದು ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯುತ್ತಿದೆ. ಮೇ 15 ರಂದು ಮತ ಎಣಿಕೆ ನಡೆಯಲಿದ್ದು, ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಹಾಗೂ ಯಾರು ಮುಂದಿನ ಮುಖ್ಯಮಂತ್ರಿಗಳಾಗಲಿದ್ದಾರೆಂಬ ಮಾಹಿತಿ ಹೊರ ಬೀಳಲಿದೆ.

ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ನೇತೃತ್ವದಲ್ಲೇ ಚುನಾವಣೆ ನಡೆಯುತ್ತಿರುವ ಕಾರಣ ಪಕ್ಷ ಅಧಿಕಾರಕ್ಕೆ ಬಂದರೆ ತಾವೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುತ್ತಿದ್ದರೆ, ಬಿಜೆಪಿ ಕೇಂದ್ರ ನಾಯಕರು ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದಾರೆ. ಇನ್ನು ಜೆಡಿಎಸ್ ಬಹುಮತ ಗಳಿಸಿದರೆ ಸಹಜವಾಗೇ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆ.

ಈ ಮಧ್ಯೆ ಕರ್ನಾಟಕದಲ್ಲಿ ಈವರೆಗೂ ಯಾವ್ಯಾವ ಮುಖ್ಯಮಂತ್ರಿಗಳು ಆಳಿದ್ದಾರೆ ಹಾಗೂ ಯಾವ್ಯಾವ ಕಾಲಘಟ್ಟದಲ್ಲಿ ಆಳಿದ್ದಾರೆ ಅನ್ನೋದ್ರ ಸಂಪೂರ್ಣ ವಿವರ ಇಲ್ಲಿದೆ.

ಕೆ.ಸಿ. ರೆಡ್ಡಿ – ಅಧಿಕಾರವಧಿ : 1947 ರಿಂದ 1952

ಕೆಂಗಲ್ ಹನುಮಂತಯ್ಯ – ಅಧಿಕಾರವಧಿ : 1952 ರಿಂದ 1956 

ಕಡಿದಾಳ್ ಮಂಜಪ್ಪ – ಅಧಿಕಾರವಧಿ : 1956 (ಆಗಸ್ಟ್ ) ರಿಂದ 1956 (ಅಕ್ಟೋಬರ್)

ಎಸ್. ನಿಜಲಿಂಗಪ್ಪ – ಅಧಿಕಾರವಧಿ : 1956 ರಿಂದ 1958

ಬಸಪ್ಪ ದಾನಪ್ಪ ಜತ್ತಿ – ಅಧಿಕಾರವಧಿ : 1958 ರಿಂದ 1962 

ಎಸ್. ಆರ್. ಕಂಠಿ – ಅಧಿಕಾರವಧಿ : 1962 (ಮಾರ್ಚ್) ರಿಂದ 1962 (ಜೂನ್) 

ಎಸ್. ನಿಜಲಿಂಗಪ್ಪ – ಅಧಿಕಾರವಧಿ : 1962 ರಿಂದ 1968

ವೀರೇಂದ್ರ ಪಾಟೀಲ್ – ಅಧಿಕಾರವಧಿ : 1968 ರಿಂದ 1971 

ಡಿ. ದೇವರಾಜ್ ಅರಸ್ – ಅಧಿಕಾರವಧಿ : 1972 ರಿಂದ 1977

ಡಿ. ದೇವರಾಜ ಅರಸ್ – ಅಧಿಕಾರವಧಿ : 1978 ರಿಂದ 1980

ಆರ್. ಗುಂಡೂರಾವ್ – ಅಧಿಕಾರವಧಿ: 1980 ರಿಂದ 1983

ರಾಮಕೃಷ್ಣ ಹೆಗಡೆ – ಅಧಿಕಾರವಧಿ : 1985 ರಿಂದ 1986

ರಾಮಕೃಷ್ಣ ಹೆಗಡೆ – ಅಧಿಕಾರವಧಿ: 1986 ರಿಂದ 1988

ಎಸ್.ಆರ್. ಬೊಮ್ಮಾಯಿ – ಅಧಿಕಾರವಧಿ: 1988 ರಿಂದ 1989

ವೀರೇಂದ್ರ ಪಾಟೀಲ್ – ಅಧಿಕಾರವಧಿ : 1989 ರಿಂದ 1990

ಎಸ್. ಬಂಗಾರಪ್ಪ- ಅಧಿಕಾರವಧಿ: 1990 ರಿಂದ 1992

ಎಂ. ವೀರಪ್ಪ ಮೊಯ್ಲಿ – ಅಧಿಕಾರವಧಿ : 1992 ರಿಂದ 1994

ಹೆಚ್.ಡಿ. ದೇವೇಗೌಡ – ಅಧಿಕಾರವಧಿ : 1994 ರಿಂದ 1996

ಜೆ.ಹೆಚ್. ಪಟೇಲ್ – ಅಧಿಕಾರವಧಿ : 1996 ರಿಂದ 1999

ಎಸ್.ಎಂ. ಕೃಷ್ಣ – ಅಧಿಕಾರವಧಿ : 1999 ರಿಂದ 2004

ಧರ್ಮಸಿಂಗ್ – ಅಧಿಕಾರವಧಿ : 2004 ರಿಂದ 2006

ಹೆಚ್. ಡಿ. ಕುಮಾರಸ್ವಾಮಿ – ಅಧಿಕಾರವಧಿ: 2006 ರಿಂದ 2007

ಬಿ.ಎಸ್. ಯಡಿಯೂರಪ್ಪ – ಅಧಿಕಾರವಧಿ : 2007 (12ನೇ ನವೆಂಬರ್) ರಿಂದ 2007 (19ನೇ ನವೆಂಬರ್)

ಬಿ ಎಸ್. ಯಡಿಯೂರಪ್ಪ – ಅಧಿಕಾರವಧಿ : 2008 – 2011

ಡಿ. ವಿ. ಸದಾನಂದ ಗೌಡ – ಅಧಿಕಾರವಧಿ: 2011 – 2012

ಜಗದೀಶ್ ಶೆಟ್ಟರ್ – ಅಧಿಕಾರವಧಿ : 2012 – 2013

ಸಿದ್ದರಾಮಯ್ಯ – ಅಧಿಕಾರವಧಿ : 2013 – 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...