alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಎಂ ದುಬಾರಿ ವಾಚ್ ಕಟ್ಟಿದ್ದು ಸರಿಯಲ್ಲ: ಕುಂವೀ

c83c02a7767349fba188f555d6d8c665

ಸಮಾಜವಾದಿ ಹಿನ್ನಲೆಯಿಂದ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ 70 ಲಕ್ಷ ರೂ. ಬೆಲೆಯ ದುಬಾರಿ ವಾಚ್ ಕಟ್ಟಿದ್ದು ಸರಿಯಲ್ಲ ಎಂದು ಸಾಹಿತಿ ಕುಂ.ವೀರಭದ್ರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸಮಾಜವಾದಿ ಎಂದು ಹೇಳಿಕೊಳ್ಳುತ್ತಾರೆ. ಅಹಿಂದದ ಬಗ್ಗೆ ಮಾತನಾಡುತ್ತಾರೆ. ಆದರೆ ದುಬಾರಿ ವಾಚ್ ಕಟ್ಟುತ್ತಾರೆ. ಇದು ಹೇಗೆ ಮಾದರಿಯಾಗುತ್ತದೆ ಎಂದು ಪ್ರಶ್ನಿಸಿದರು.

ಸಿಎಂ ದುಬಾರಿ ವಾಚ್ ಕಟ್ಟಿದ್ದು ಅಸಹ್ಯ ಮತ್ತ ತಪ್ಪು. ರಾಜಕಾರಣಿಗಳು ಸರಳವಾಗಿ, ಮಾದರಿಯಾಗುವಂತಿರಬೇಕು. ಆದರೆ ಸರಳತೆಯ ಬಗ್ಗೆ, ಬಡವರ ಬಗ್ಗೆ ಕಾಳಜಿ ವಹಿಸಿ ಮಾತನಾಡುವ ಮುಖ್ಯಮಂತ್ರಿಗಳೇ ದುಬಾರಿ ವಾಚ್ ಕಟ್ಟಿಕೊಂಡಿದ್ದು, ಮಡದಿಗಾಗಿ ದುಬಾರಿ ಬೆಲೆಯ ಸೀರೆ ಖರೀದಿಸಿದ್ದು ಸರಿಯಲ್ಲ ಎಂಬುದು ನನ್ನ ಭಾವನೆ. ನಾನು ಸಿದ್ಧರಾಮಯ್ಯನವರ ಬಗ್ಗೆ ಗೌರವ ಇಟ್ಟುಕೊಂಡೆ ಈ ಮಾತನ್ನು ಹೇಳುತ್ತಿದ್ದೇನೆ ಎಂದು ತಿಳಿಸಿದರು.

ರಾಜಕಾರಣಿಗಳೆಲ್ಲ ಗಾಜಿನ ಮನೆಯಲ್ಲಿಯೇ ಇದ್ದಾರೆ. ಅಧಿಕಾರದ ದುರುಪಯೋಗ ಎಲ್ಲ ಕಡೆ ನಡೆಯುತ್ತಿದೆ. ಕೆಲವರು ಕರ್ನಾಟಕದ ಆಸ್ತಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಭ್ರಷ್ಟಾಚಾರ ವಿಷಯದಲ್ಲಿ ಹೆಚ್ಚುಕಡಿಮೆ ಎಲ್ಲರೂ ಸಮಾನರು ಎಂದು ಟೀಕಿಸಿದರು.

ರಾಜಕಾರಣಿಗಳು ಮೊದ ಮೊದಲು ತಮಗೆ, ತಮ್ಮ ಮಕ್ಕಳಿಗೆ ಆಸ್ತಿ ಮಾಡಿಕೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ 10 ತಲೆಮಾರಿಗಾಗುವಷ್ಟು ಆಸ್ತಿ ಮಾಡುತ್ತಿದ್ದಾರೆ. ಕೆಲವು ಸ್ವಾಮೀಜಿಗಳ ಕೂಡ ಭಯ ಹುಟ್ಟಿಸುತ್ತಿದ್ದಾರೆ. ಒಬ್ಬರ ಹಕ್ಕನ್ನು ಮತ್ತೊಬ್ಬರು ಕಿತ್ತುಕೊಳ್ಳುವುದು ತಪ್ಪು. ಸಂವಿಧಾನವನ್ನು ನಾವು ಗೌರವಿಸಬೇಕು ಎಂದು ಹೇಳಿದರು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ದೇಶದಲ್ಲಿ ಹಿಂಸಾತ್ಮಕ ಚಟುವಟಿಕೆಗಳು ಹೆಚ್ಚುತ್ತಿರುವುದು ಅಪಾಯಕಾರಿ ಬೆಳವಣಿಗೆ. ಪ್ರಧಾನಿ ಮೋದಿ ಸರಿ ಇರಬಹುದು ಆದರೆ ಅವರ ಸುತ್ತ ಇರುವವರಲ್ಲಿ ಕೆಲವರು ಸರಿಯಿಲ್ಲ. ವಿಶ್ವವಿದ್ಯಾಲಯಗಳು ಕೂಡ ಬದಲಾಗುತ್ತಿವೆ. ದೆಹಲಿಯ ಜವಾಹರ ನೆಹರೂ ವಿವಿ ಯಲ್ಲಿ ಆಗಿರುವ ಘಟನೆ ನ್ಯಾಯಾಲಯದಲ್ಲಿದೆ. ಹೀಗಾಗಿ ಈ ಬಗ್ಗೆ ನಾನು ಹೆಚ್ಚು ಮಾತನಾಡಲಾರೆ. ಆದರೆ ಕೆಲವು ಸಂಘಟನೆಗಳು ಪ್ರಕರಣವನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ ಎಂದ ಅವರು, ಯಾರೇ ಆಗಲಿ ದೇಶದ್ರೋಹದ ಕೆಲಸ ಮಾಡುವುದು ಸರಿಯಲ್ಲ. ದೇಶದ ಪ್ರಜಾಪ್ರಭುತ್ವವನ್ನು ಮತ್ತು ಸಂವಿಧಾನವನ್ನು, ನ್ಯಾಯಾಲಯವನ್ನು ನಾವು ಗೌರವಿಸಬೇಕು ಎಂದು ಹೇಳಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...