alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಜೆಯೊಳಗೆ ಸಚಿವರಿಗೆ ಖಾತೆ ಹಂಚಿಕೆ ಸಾಧ್ಯತೆ, ಯಾರಿಗೆ ಯಾವ ಖಾತೆ ಗೊತ್ತಾ?

ಕಾಂಗ್ರೆಸ್ ಮತ್ತು ಜನತಾದಳ ಪಕ್ಷದವರು ಅಳೆದು ತೂಗಿ ಸಂಪುಟ ರಚನೆಯನ್ನು ಪೂರ್ಣಗೊಳಿಸಿದ್ದಾರೆ. ಈಗ ಮುಖ್ಯಮಂತ್ರಿ ಕುಮಾರಸ್ವಾಮಿ, ನೂತನ ಸಚಿವರಿಗೆ ಖಾತೆಗಳನ್ನು ಹಂಚಲು ಸಾಕಷ್ಟು ಕಸರತ್ತು ನಡೆಸುತ್ತಿದ್ದು, ಸಂಜೆ ವೇಳೆಗೆ ಈ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಸಂಪುಟ ರಚನೆ ಬಳಿಕ ಕಾಂಗ್ರೆಸ್ ಹಾಗೂ ಜನತಾದಳದಲ್ಲಿ ಬಂಡಾಯ ಭುಗಿಲೆದ್ದಿದ್ದು, ಇದನ್ನು ಶಮನಗೊಳಿಸಲು ಉಭಯ ಪಕ್ಷಗಳ ನಾಯಕರು ಹೆಣಗಾಡುತ್ತಿದ್ದಾರೆ. ಇದರ ಮಧ್ಯೆ ಸಚಿವರಾಗಿರುವವರು ತಮಗೆ ನಿರ್ದಿಷ್ಟ ಖಾತೆಯೇ ಬೇಕೆಂದು ಪಟ್ಟು ಹಿಡಿದಿದ್ದಾರೆ. ಇದು ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿಯವರು ಹಣಕಾಸು ಖಾತೆಯನ್ನು ಹಾಗೂ ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರು ಗೃಹ ಖಾತೆಯನ್ನು ವಹಿಸಿಕೊಳ್ಳಲಿದ್ದಾರೆ. ಉಳಿದ ಸಚಿವರ ಸಂಭವನೀಯ ಖಾತೆಗಳ ವಿವರ ಈ ರೀತಿ ಇದೆ.

ಸಚಿವರ ಸಂಭವನೀಯ ಖಾತೆಗಳು :

ಆರ್.ವಿ. ದೇಶಪಾಂಡೆ – ಜಲಸಂಪನ್ಮೂಲ

ಡಿ.ಕೆ. ಶಿವಕುಮಾರ್ – ಇಂಧನ

ಕೆ.ಜೆ. ಜಾರ್ಜ್ – ಬೃಹತ್ ಕೈಗಾರಿಕೆ

ಕೃಷ್ಣಬೈರೇಗೌಡ – ಗ್ರಾಮೀಣಾಭಿವೃದ್ಧಿ

ಹೆಚ್.ಡಿ.ರೇವಣ್ಣ – ಲೋಕೋಪಯೋಗಿ

ಎನ್.ಹೆಚ್. ಶಿವಶಂಕರ ರೆಡ್ಡಿ – ಕೃಷಿ

ರಮೇಶ್ ಜಾರಕಿಹೊಳಿ – ಸಮಾಜ ಕಲ್ಯಾಣ

ಜಿ.ಟಿ. ದೇವೇಗೌಡ – ಸಹಕಾರ

ಎಂ.ಸಿ. ಮನಗೂಳಿ – ಸಣ್ಣ ಕೈಗಾರಿಕೆ

ಎಸ್.ಆರ್. ಶ್ರೀನಿವಾಸ್ – ತೋಟಗಾರಿಕೆ

ವೆಂಕಟರಾವ್ ನಾಡಗೌಡ – ಸಣ್ಣ ನೀರಾವರಿ

ಸಿ.ಎಸ್. ಪುಟ್ಟರಾಜು – ಸಾರಿಗೆ

ಸಾ.ರಾ. ಮಹೇಶ್- ಪ್ರವಾಸೋದ್ಯಮ

ಎನ್. ಮಹೇಶ್ – ಸಣ್ಣ ನೀರಾವರಿ

ಡಿ.ಸಿ. ತಮ್ಮಣ್ಣ – ಉನ್ನತ ಶಿಕ್ಷಣ

ಪ್ರಿಯಾಂಕ್ ಖರ್ಗೆ – ಐಟಿಬಿಟಿ

ಯು.ಟಿ. ಖಾದರ್ – ನಗರಾಭಿವೃದ್ಧಿ

ಜಮೀರ್ ಅಹ್ಮದ್ – ವಸತಿ, ಅಲ್ಪಸಂಖ್ಯಾತ ಹಾಗೂ ವಕ್ಫ್

ಶಿವಾನಂದ ಪಾಟೀಲ್ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ

ವೆಂಕಟರಮಣಪ್ಪ – ಬಂದರು ಮತ್ತು ಮೀನುಗಾರಿಕೆ

ರಾಜಶೇಖರ್ ಪಾಟೀಲ್- ಅರಣ್ಯ

ಪುಟ್ಟರಂಗಶೆಟ್ಟಿ – ಕಾರ್ಮಿಕ

ಶಂಕರ್ – ಯುವಜನ ಮತ್ತು ಕ್ರೀಡೆ

ಜಯಮಾಲ – ಮಹಿಳಾ ಮತ್ತು ಮಕ್ಕಳ ಕಲ್ಯಾಣ

ಬಂಡೆಪ್ಪ ಕಾಶೆಂಪುರ – ಪಶು ಸಂಗೋಪನಾ

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...