alex Certify
ಕನ್ನಡ ದುನಿಯಾ       Mobile App
       

Kannada Duniya

ಯುಗಾದಿ ನಂತರ ಸಂಪುಟ ಸರ್ಜರಿ: ಯಾರಿಗೆ ಬೇವು.? ಬೆಲ್ಲದ ಸವಿ ಯಾರಿಗೆ..?

30bg_bgsat_Arka_31_2295719f

ಮುಖ್ಯಮಂತ್ರಿ ಆದಾಗಿನಿಂದಲೂ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳುತ್ತಲೇ ಅತೃಪ್ತರ ಮೂಗಿಗೆ ತುಪ್ಪ ಸವರುತ್ತಾ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಯುಗಾದಿ ನಂತರ ಸಚಿವ ಸಂಪುಟದ ಸರ್ಜರಿಗೆ ಮುಂದಾಗಿದ್ದು, ಯಾರಿಗೆ ಬೇವು, ಮತ್ಯಾರಿಗೆ ಬೆಲ್ಲ ಸಿಗಲಿದೆ ಎಂಬ ಮಾಹಿತಿ ಕಾಂಗ್ರೆಸ್ ವಲಯದಿಂದ ಲಭ್ಯವಾಗಿದೆ.

ಹೌದು. ಸಂಪುಟ ಪುನಾರಚನೆ ಸಲುವಾಗಿ ಈಗಾಗಲೇ ಸಾಕಷ್ಟು ಕಸರತ್ತು ನಡೆಸುತ್ತಿರುವ ಸಿದ್ದರಾಮಯ್ಯನವರ ದೆಹಲಿ ಯಾತ್ರೆ ಅಂತ್ಯವಾಗಿದ್ದು, ಯುಗಾದಿ ಬಳಿಕ ಸಂಪುಟ ಸರ್ಜರಿಗೆ ಹೈಕಮಾಂಡ್ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ. ಅಲ್ಲದೇ ಅಧಿವೇಶನ ಮುಗಿದ ಬಳಿಕ ದೆಹಲಿಗೆ ತೆರಳಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬದಲಾವಣೆಯ ಪಟ್ಟಿಗೆ ಅಂಕಿತ ಹಾಕಿಸಿಕೊಂಡು ಬರಲಿದ್ದು, ಹಲವರು ಮಂತ್ರಿ ಸ್ಥಾನ ಕಳೆದುಕೊಂಡರೆ ಹಲವು ಅತೃಪ್ತರ ಕನಸು ನನಸಾಗಲಿದೆ.

ಖುರ್ಚಿ ಕಳೆದುಕೊಳ್ಳಲಿರುವ ಸಂಭಾವ್ಯರು:
ಬಾಬುರಾವ್ ಚಿಂಚನಸೂರು
ಖಮರುಲ್ ಇಸ್ಲಾಂ
ಪರಮೇಶ್ವರ್ ನಾಯ್ಕ್
ಶ್ರೀನಿವಾಸ್ ಪ್ರಸಾದ್
ಕಿಮ್ಮನೆ ರತ್ನಾಕರ್
ಶ್ಯಾಮನೂರು ಶಿವಶಂಕರಪ್ಪ ಹಾಗೂ
ಅಂಬರೀಶ್

ಯಾರಿಗೆ ಖುಲಾಯಿಸಲಿದೆ ಅದೃಷ್ಟ..?
ರಮೇಶ್ ಕುಮಾರ್
ಕೆ.ಬಿ. ಕೋಳಿವಾಡ
ಬಸವರಾಜ್ ರಾಯರೆಡ್ಡಿ
ಮಾಲೀಕಯ್ಯ ಗುತ್ತೇದಾರ್
ನರೇಂದ್ರಸ್ವಾಮಿ ಹಾಗೂ
ಎಂ ಕೃಷ್ಣಪ್ಪ

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...