alex Certify
ಕನ್ನಡ ದುನಿಯಾ       Mobile App
       

Kannada Duniya

ಸಿದ್ದರಾಮಯ್ಯ ಬಜೆಟ್: ಯಾವುದು ಅಗ್ಗ, ದುಬಾರಿ ಆಗಿದ್ದೇನು..?

1860641

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ರಾಜ್ಯ ಬಜೆಟ್ ಮಂಡನೆ ಮಾಡಿದ್ದು, ರಾಜ್ಯದ ಬರಿದಾಗಿರುವ ಬೊಕ್ಕಸ ತುಂಬಿಸುವ ಯತ್ನವನ್ನು ನಡೆಸುವ ಮೂಲಕ ಚಾಣಾಕ್ಷ ನಡೆ ಅನುಸರಿಸಿದ್ದಾರೆ. ಬಜೆಟ್ ನಲ್ಲಿ ಹಲವು ಅಗತ್ಯ ಉತ್ಪನ್ನಗಳ ತೆರಿಗೆ ತಗ್ಗಿಸಿದ್ದು, ಇನ್ನು ಹಲವಷ್ಟು ವಸ್ತುಗಳ ಮೇಲೆ ತೆರಿಗೆಯ ಬರೆ ಎಳೆದಿದ್ದಾರೆ.

ಅಗ್ಗವಾಗಿದ್ದೇನು …?
ಎಲ್‌ಇಡಿ ಬಲ್ಬ್‌ಗಳ ಮೇಲಿನ ತೆರಿಗೆ ಇಳಿಕೆ
ಸೆಟ್‌ ಟಾಪ್ ಬಾಕ್ಸ್ ದರ ಇಳಿಕೆ
ಹತ್ತಿ ಮೇಲಿನ ತೆರಿಗೆ ಇಳಿಕೆ
ವೈದ್ಯಕೀಯ ಉಪಕರಣಗಳ ಮೇಲಿನ ತೆರಿಗೆ ಇಳಿಕೆ
ಚಟ್ನಿಪುಡಿ ಮೇಲಿನ ತೆರಿಗೆ ಶೇ.14.5 ರಿಂದ ಶೇ.5.5 ಕ್ಕೆ ಇಳಿಕೆ
ಕಾಗದ ಉತ್ಪನ್ನಗಳ ಮೇಲಿನ ತೆರಿಗೆ ವಿನಾಯಿತಿ
ಕಾಫಿ, ಟೀ, ರಬ್ಬರ್ ಸೇರಿದಂತೆ ತೋಟದ ಬೆಳೆಗಳ ಮೇಲಿನ ಕೃಷಿ ವರಮಾನ ತೆರಿಗೆ ರದ್ದು
ವಿದ್ಯುತ್ ಚಾಲಿತ ವಾಹನಗಳಿಗೆ ಸಂಪೂರ್ಣ ತೆರಿಗೆ ವಿನಾಯಿತಿ.

ದುಬಾರಿಯಾಗಿದ್ದು:
ಮದ್ಯದ ಮೇಲಿನ ಲೈಸೆನ್ಸ್ ಶುಲ್ಕ ಶೇ.25 ರಷ್ಟು ಹೆಚ್ಚಳ
ಡಿಟಿಎಚ್ ಸೇವೆ ದುಬಾರಿ. ಶೇ.6 ರಿಂದ ಶೇ.10 ಕ್ಕೆ ತೆರಿಗೆ ಏರಿಕೆ
ತಂಪು ಪಾನೀಯಗಳ ಮೇಲಿನ ತೆರಿಗೆ ಏರಿಕೆ
ಮನರಂಜನಾ ತೆರಿಗೆ ಶೇ.6 ರಷ್ಟು ಏರಿಕೆ
ಲಗ್ಸುರಿ ಖಾಸಗಿ ವಾಹನಗಳ ಮೇಲಿನ ತೆರಿಗೆ ಹೆಚ್ಚಳ (ಪ್ರತಿ ಸೀಟ್ ಮೇಲಿನ ತೆರಿಗೆ 600 ರೂ.ನಿಂದ 900 ರೂ.ಗೆ ಹೆಚ್ಚಳ.) ಒಪ್ಪಂದ ವಾಹನ ಮೇಲಿನ ತೆರಿಗೆ 1000 ರೂ.ನಿಂದ 1500 ರೂ.ಗೆ ಏರಿಕೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...