alex Certify
ಕನ್ನಡ ದುನಿಯಾ       Mobile App
       

Kannada Duniya

ಕುಮಾರಸ್ವಾಮಿ ಮೂಲಕ ನನಸಾಗಲಿದ್ಯಾ ರಾಹುಲ್ ಗಾಂಧಿ ಕನಸು?

ಕರ್ನಾಟಕದ ಮುಖ್ಯಮಂತ್ರಿ ಕುಮಾರಸ್ವಾಮಿ ಗುರುವಾರ ಸರ್ಕಾರದ ಚೊಚ್ಚಲ ಬಜೆಟ್ ಮಂಡನೆ ಮಾಡಿದ್ದಾರೆ. ನಿರೀಕ್ಷೆಯಂತೆ ಕೃಷಿ ಸಾಲ ಮನ್ನಾ ಸೇರಿದಂತೆ ಅನೇಕ ಘೋಷಣೆಗಳನ್ನು ಕುಮಾರಸ್ವಾಮಿ ಮಾಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಗಮನದಲ್ಲಿಟ್ಟುಕೊಂಡು Compete With China ಘೋಷಣೆಯನ್ನು ಮಾಡಿದ್ದಾರೆ.

ಯೋಜನೆ ಪ್ರಕಾರ ಕರ್ನಾಟಕದ ಗ್ರಾಮ ಮಟ್ಟದಲ್ಲಿ ಬಿಡಿಭಾಗಗಳು ತಯಾರಾಗಲಿವೆ. ತಾಲೂಕು ಮಟ್ಟದಲ್ಲಿ ಇವುಗಳನ್ನು ಒಟ್ಟುಗೂಡಿಸಲಾಗುವುದು. ರಾಜ್ಯದ ಕೆಲ ಪ್ರದೇಶಗಳಲ್ಲಿ ಈ ವಸ್ತುಗಳ ಮಾರಾಟಕ್ಕೆ ಮಾಲ್ ತೆರೆಯಲಾಗುವುದು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಮೇಡ್ ಇನ್ ಚೈನಾ ವಸ್ತುಗಳಿಗೆ ಕಡಿವಾಣ ಹಾಕುವುದು ಇದ್ರ ಉದ್ದೇಶವಾಗಿದೆ. ಚೀನಾ ನಮ್ಮ ಪ್ರತಿಸ್ಪರ್ಧಿ ಎಂದು ಆಗಾಗ ರಾಹುಲ್ ಗಾಂಧಿ ಭಾಷಣದಲ್ಲಿ ಹೇಳ್ತಿರುತ್ತಾರೆ. ನಾವು ಮೊಬೈಲ್ ನಲ್ಲಿ ಒಂದು ಸೆಲ್ಫಿ ಕ್ಲಿಕ್ಕಿಸಿದ್ರೆ ಚೀನಾದ ಒಬ್ಬ ವ್ಯಕ್ತಿಗೆ ಉದ್ಯೋಗ ಸಿಕ್ಕಂತೆ. ನಮ್ಮಲ್ಲೂ ಇಂಥ ನೀತಿ ಜಾರಿಗೆ ಬರಬೇಕು ಎಂದು ರಾಹುಲ್ ಹೇಳುತ್ತಿರುತ್ತಾರೆ. ಮೇಡ್ ಇನ್ ಕರ್ನಾಟಕ ಬಗ್ಗೆ ರಾಹುಲ್ ಆಸಕ್ತಿ ತೋರಿದ್ದರು.

ಬಜೆಟ್ ನಲ್ಲಿ ಕುಮಾರಸ್ವಾಮಿ ಚಿತ್ರದುರ್ಗವನ್ನು ಎಲ್ ಇಡಿ ಲೈಟ್ ಹಬ್ ರೀತಿಯಲ್ಲಿ ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡಿದ್ದಾರೆ. ಪ್ರಸ್ತುತ ಎಲ್ ಇಡಿ ಬಲ್ಬ್ ಗಳ ಬಿಡಿಭಾಗಗಳು ಚೀನಾದಿಂದ ಆಮದಾಗುತ್ತಿವೆ. ಚಿಕ್ಕಬಳ್ಳಾಪುರವನ್ನು ಮೊಬೈಲ್ ಹಬ್ ಆಗಿ ಅಭಿವೃದ್ಧಿಪಡಿಸಲಾಗುವುದು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...