alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ಕಾರ ನೀಡಿದ ಬಂಗಲೆಯನ್ನು ನಿರಾಕರಿಸಿದ ಬಿ.ಎಸ್.ವೈ.

ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪನವರಿಗೆ ಸರ್ಕಾರಿ ಬಂಗಲೆ ಸಿಕ್ಕಿದೆ. ಆದ್ರೆ, ಈ ಬಂಗಲೆ ಬೇಡ ಎಂದು ಬಿ.ಎಸ್.ವೈ. ಕಡ್ಡಿ ಮುರಿದಂತೆ ಹೇಳಿದ್ದಾರೆ. ಅಲ್ಲದೆ ತಮ್ಮ ಖಾಸಗಿ ನಿವಾಸದಲ್ಲಿಯೇ ಇರೋದಾಗಿ ತಿಳಿಸಿದ್ದಾರೆ.

ಬಿಜೆಪಿ ಹಿರಿಯ ಮುಖಂಡ ಯಡಿಯೂರಪ್ಪನವರಿಗೆ ಸರ್ಕಾರ, ಬೆಂಗಳೂರಿನಲ್ಲಿ ನಿವಾಸ ನೀಡಲು ಮುಂದಾಗಿತ್ತು. ಆದ್ರೆ, ಬಯಸಿದ ನಿವಾಸ ಸಿಗಲಿಲ್ಲ ಎಂಬ ಕಾರಣಕ್ಕೆ ಬೇಡ ಎಂದಿದ್ದಾರೆ. ತಾವು ಮುಖ್ಯಮಂತ್ರಿಯಾಗಿದ್ದಾಗ ಯಡಿಯೂರಪ್ಪನವರು ರೇಸ್ ಕೋರ್ಸ್ ರಸ್ತೆಯ 2ನೇ ನಂಬರ್ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಈ ಮನೆ ಸಿಗದ ಹಿನ್ನೆಲೆಯಲ್ಲಿ ಯಡಿಯೂರಪ್ಪ ತಮಗೆ ಮನೆ ಬೇಡ ಎಂದಿದ್ದಾರೆ.

ಸದ್ಯ ರೇಸ್ ಕೋರ್ಸ್ ನಿವಾಸವನ್ನು ಸಾ.ರಾ. ಮಹೇಶ್ ಅವರಿಗೆ ನೀಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಸರ್ಕಾರ ಯಡಿಯೂರಪ್ಪನವರಿಗೆ ಬಂಗಲೆ ನೀಡಿದೆ. ತಾವು ಕೇಳಿದ್ದೇ ಬೇಕು ಎಂದ್ರೆ, ಏನು ಮಾಡಬೇಕು. ಸಚಿವರು ಸಹ ಮನೆ ನೀಡುವಂತೆ ಕೇಳಿಕೊಂಡಿದ್ದರು ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...