alex Certify
ಕನ್ನಡ ದುನಿಯಾ       Mobile App
       

Kannada Duniya

ನೌಕಾನೆಲೆಯಲ್ಲಿ ಆತಂಕ ಮೂಡಿಸಿದ ಮೊಸಳೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕದಂಬ ನೌಕಾನೆಲೆಯಲ್ಲಿ ಬೃಹತ್ ಗಾತ್ರದ ಮೊಸಳೆ ಕಾಣಿಸಿಕೊಂಡು ಆತಂಕ ಮೂಡಿಸಿದೆ.

ಬಳಿಕ ಮೊಸಳೆಯನ್ನು ಸುರಕ್ಷಿತವಾಗಿ ಹಿಡಿದು ನದಿಗೆ ಬಿಡಲಾಗಿದೆ. 8 ಅಡಿಗೂ ಉದ್ದದ ಬೃಹತ್ ಮೊಸಳೆ ನೌಕಾನೆಲೆಯಲ್ಲಿ ಕಾಣಿಸಿಕೊಂಡಿದ್ದು, ಕಾರವಾರ ಆರ್.ಎಫ್.ಓ. ನೇತೃತ್ವದಲ್ಲಿ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಡೇರಿಂಗ್ ಟೀಂ ನಿಂದ ಮೊಸಳೆಯನ್ನು ಹಿಡಿಯಲಾಗಿದೆ.

ಬಳಿಕ ಕಾಡಿನ ಬಳಿ ನದಿಯಲ್ಲಿ ಬಿಡಲಾಗಿದೆ. ಕಾಡಿಗೆ ಹೊಂದಿಕೊಂಡಂತೆ ಈ ಪ್ರದೇಶವಿದ್ದು, ಸಮುದ್ರ ಇಲ್ಲವೇ ನದಿಯಿಂದ ಮೊಸಳೆ ದಡಕ್ಕೆ ಬಂದಿರಬಹುದೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...