alex Certify
ಕನ್ನಡ ದುನಿಯಾ       Mobile App
       

Kannada Duniya

‘ಪನಾಮಾ ಸೋರಿಕೆ’ಯಲ್ಲಿ ಮತ್ತಿಬ್ಬರು ಕನ್ನಡಿಗರ ಹೆಸರು

CfKBt7HUYAEAigB

ಪನಾಮದಲ್ಲಿರುವ ರಹಸ್ಯ ಕಾನೂನು ಸಂಸ್ಥೆ ಮೊಸಾಕ್ ಫೋನ್ಸಿಕಾದಲ್ಲಿ ಹಣ ಇಟ್ಟ 500 ಭಾರತೀಯ ಗಣ್ಯರ ಹೆಸರು ಬಹಿರಂಗವಾಗಿದ್ದ ಬೆನ್ನಲ್ಲಿಯೇ ಸಚಿವ ಶಾಮನೂರು ಶಿವಶಂಕರಪ್ಪ ಅವರ ಅಳಿಯ ಮಾತ್ರವಲ್ಲ, ಇನ್ನಿಬ್ಬರು ಕನ್ನಡಿಗರ ಹೆಸರೂ ಸಹ ಬಯಲಾಗಿದ್ದು, ಕುತೂಹಲಕ್ಕೆ ಕಾರಣವಾಗಿದೆ.

ಹೌದು. ಈಗಾಗಲೇ ಕಪ್ಪು ಹಣದಾತರನ್ನು ಸಂಕಷ್ಟಕ್ಕೆ ಸಿಲುಕಿಸಿರುವ ‘ಪನಾಮ ರಹಸ್ಯ’ ಹಲವು ಉದ್ಯಮಿಗಳು, ಬಾಲಿವುಡ್ ನಟರು ಮಾತ್ರವಲ್ಲ ಕೆಲ ರಾಜಕಾರಣಿಗಳ ನಿದ್ದೆಗೆಡಿಸಿದೆ. ಇದರ ಬೆನ್ನಲ್ಲಿಯೇ ಬಳ್ಳಾರಿ ಮೂಲದ ಪ್ರಸನ್ನ ವಿ.ಘೋಟಗೆ ಮತ್ತು ವಾಮನ್ ಕುಮಾರ್ ಎಂಬಿಬ್ಬರ ಹೆಸರೂ ಸಹ ಈ ಪಟ್ಟಿಯಲ್ಲಿದೆ ಎನ್ನಲಾಗಿದೆ.

ವಂಚನೆ ಆರೋಪದಲ್ಲಿ ಜೈಲಿಗೂ ಹೋಗಿ ಬಂದಿರುವ ಇವರುಗಳು ಬ್ರಿಟಿಷ್ ವರ್ಜಿನ್ ಐರ್ಲೆಂಡ್ ನಲ್ಲಿ ಕಂಪನಿಯೊಂದನ್ನು ಸ್ಥಾಪಿಸಿದ್ದಾರೆನ್ನಲಾಗಿದ್ದು, ಸಾವಿರ ಶೇರುಗಳನ್ನು ವಾಮನ್ ಕುಮಾರ್ ಗೆ ಮಾರಾಟ ಮಾಡಿದ್ದಾರೆ ಎಂಬ ಮಾಹಿತಿ ಮೊಸಾಕ್ ಫೋನ್ಸಿಕಾಗೆ ಸೇರಿದ ರಹಸ್ಯ ದಾಖಲೆಗಳಲ್ಲಿ ಇದೆ ಎಂಬ ಮಾಹಿತಿ ಲಭ್ಯವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...