alex Certify
ಕನ್ನಡ ದುನಿಯಾ       Mobile App
       

Kannada Duniya

ದಾಖಲೆಗೆ ಪಾತ್ರವಾಗಲಿದೆ ಬೃಹತ್ ಕನ್ನಡ ಬಾವುಟ

ಬೆಂಗಳೂರು: ಕನ್ನಡ ರಾಜ್ಯೋತ್ಸವ ಪ್ರಯುಕ್ತ ನವೆಂಬರ್ 1 ರಂದು ಕನ್ನಡ ಮನಸುಗಳ ವೇದಿಕೆಯಿಂದ ಬೃಹತ್ ಕನ್ನಡ ಬಾವುಟದೊಂದಿಗೆ ಪಥ ಸಂಚಲನ ನಡೆಸಲಾಗುವುದು.

ಮೊದಲ ಬಾರಿಗೆ 2040 ಮೀಟರ್ ಉದ್ದದ ಕನ್ನಡ ಬಾವುಟದ ಪಥ ಸಂಚಲನ ಬೆಂಗಳೂರಿನ ಸಂಗಮ ಸರ್ಕಲ್ ನಿಂದ ಪುರಭವನದವರೆಗೆ ನಡೆಯಲಿದೆ.

ಸುಮಾರು 16 ಕಿಲೋ ಮೀಟರ್ ಮೆರವಣಿಗೆ ವಿಜೃಂಭಣೆಯಿಂದ ನಡೆಯಲಿದೆ. ಇದು ಲಿಮ್ಕಾ ಬುಕ್ ಆಫ್ ರೆಕಾರ್ಡ್ ಗೆ ಸೇರಲಿದೆ.

ನವೆಂಬರ್ 1 ರಂದು ಬೆಳಿಗ್ಗೆ 7.30 ಕ್ಕೆ ಜಯನಗರ 8 ನೇ ಬ್ಲಾಕ್ ನ ಸಂಗಮ ವೃತ್ತದಿಂದ ಮೆರವಣಿಗೆ ಆರಂಭವಾಗಲಿದ್ದು, ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಕೋರಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...