alex Certify
ಕನ್ನಡ ದುನಿಯಾ       Mobile App
       

Kannada Duniya

ನೈರೋಬಿಯಲ್ಲಿ ಕನ್ನಡದ ಕಂಪು…!

ವಿದೇಶಗಳಿಗೆ ಹೋದಾಗ ಮಾತೃಭಾಷೆಯ ಬೋರ್ಡ್ ಗಳು ಕಂಡ್ರೆ ಆಗುವ ಸಂತಸ ಅಷ್ಟಿಷ್ಟಲ್ಲ. ಕರ್ನಾಟಕದಲ್ಲಿಯೇ ಕನ್ನಡ ಬೋರ್ಡ್ ಗಳು ನಾಪತ್ತೆಯಾಗುತ್ತಿರುವ ಕಾಲದಲ್ಲಿ ನೈರೋಬಿಯಲ್ಲಿ ಕನ್ನಡ ಫಲಕ ಕಂಡ್ರೆ, ಅಚ್ಚರಿ ಸಂತೋಷ ಆಗದೆ ಇರದು.

ಇಲ್ಲಿ ಕಾಣುತ್ತಿರುವ ಫೋಟೋ ಕರ್ನಾಟಕದ ಯಾವುದೋ ಜಿಲ್ಲೆಯದ್ದಂತೂ, ಅಲ್ಲವೇ ಅಲ್ಲ. ನೈರೋಬಿಯಾದ ಸೂಪರ್ ಮಾರ್ಕೆಟ್ ಹಾಗೂ ಉಡುಪಿ ಹೊಟೇಲ್ ನದ್ದು. ಎಸ್….ಮೂಲತಃ ಕರ್ನಾಟಕದ ಸ್ಮಿತಾ ಪ್ರಭು ನೈರೋಬಿದಲ್ಲಿ ಅಂಗಡಿ ನಡೆಸುತ್ತಾರೆ. ಈ ಅಂಗಡಿಗೆ ಕನ್ನಡದಲ್ಲಿಯೇ ನಾಮಫಲಕ ಹಾಕಿದ್ದು, ಇವರ ಮಾತೃಭಾಷಾ ಪ್ರೀತಿಗೆ ಹಿಡಿದ ಕೈಗನ್ನಡಿಯಾಗಿದೆ.

ಕಾರ್ಕಳ ಮೂಲದ ಸ್ಮಿತಾ ತಮ್ಮ ಹೊಟೇಲ್ ನಲ್ಲಿ, ಕರ್ನಾಟಕದ ತಿನಿಸುಗಳನ್ನು ನೀಡುತ್ತಾರೆ. ಇಲ್ಲಿನ ಸವಿಯನ್ನು ಸವಿದ್ರೆ, ನಿಜಕ್ಕೂ ತಾಯ್ನಾಡಿನ ವಾಸನೆ ಮೂಗಿಗೆ ತಟ್ಟುತ್ತದೆ. ವಿದೇಶದಲ್ಲೂ, ಕನ್ನಡದ ಕಂಪನ್ನು ಪಸರಿಸುತ್ತಿರುವ ಸ್ಮಿತಾರಿಗೆ ಹ್ಯಾಟ್ಸ್ ಅಪ್. ಅಂದ ಹಾಗೇ ಈ ಕುರಿತ ಮಾಹಿತಿಯನ್ನು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ನಿತ್ಯಾನಂದ್ ಭಟ್ ಎಂಬವರು ಹಂಚಿಕೊಂಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...