alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರತ್ಯೇಕ ನಾಡಧ್ವಜಕ್ಕೆ ಅವಕಾಶವಿಲ್ಲ, ನಿರ್ಬಂಧವೂ ಇಲ್ಲ

ರಾಜ್ಯಕ್ಕೆ ಪ್ರತ್ಯೇಕ ನಾಡಧ್ವಜ ಬಿಡುಗಡೆ ಮಾಡಿ, ಒಪ್ಪಿಗೆ ಕೋರಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಆದರೆ, ಸಂವಿಧಾನದ 370 ನೇ ಕಲಂ ಅಡಿ ಜಮ್ಮು ಮತ್ತು ಕಾಶ್ಮೀರವನ್ನು ಹೊರತುಪಡಿಸಿ, ಉಳಿದ ರಾಜ್ಯಗಳು ಪ್ರತ್ಯೇಕ ಧ್ವಜವನ್ನು ಹೊಂದಿಲ್ಲ. ಪ್ರತ್ಯೇಕ ಧ್ವಜವನ್ನು ಹೊಂದುವ ಅವಕಾಶ ಬೇರೆ ರಾಜ್ಯಗಳಿಗೆ ಇಲ್ಲ. ಆದರೆ, ರಾಜ್ಯಗಳು ಧ್ವಜವನ್ನು ಹೊಂದಲು ನಿರ್ಬಂಧ ಕೂಡ ಇಲ್ಲ ಎನ್ನಲಾಗಿದೆ.

ಭಾರತದ ಧ್ವಜ ಸಂಹಿತೆ ಮತ್ತು ಸರ್ಕಾರದ ಲಾಂಛನ ಕಾಯ್ದೆಯ ಅನ್ವಯ, ತ್ರಿವರ್ಣ ಧ್ವಜದ ಹೊರತಾಗಿ ಉಳಿದ ಯಾವ ಧ್ವಜದ ಬಗ್ಗೆಯೂ ಪ್ರಸ್ತಾಪಿಸಲಾಗಿಲ್ಲ.

ರಾಜ್ಯದಲ್ಲಿ ಬಳಕೆಯಲ್ಲಿರುವ ನಾಡಧ್ವಜ ಸರ್ಕಾರವನ್ನು ಪ್ರತಿನಿಧಿಸುವುದಿಲ್ಲ. ರಾಜ್ಯೋತ್ಸವ ಸಮಾರಂಭದಲ್ಲಿ ನಾಡಧ್ವಜ ಬಳಸಲಾಗುತ್ತಿದೆ ಹೊರತು, ಬೇರೆ ರಾಷ್ಟ್ರೀಯ ದಿನಾಚರಣೆಗಳಂದು ನಾಡಧ್ವಜ ಬಳಸುವುದಿಲ್ಲ. ಪ್ರತ್ಯೇಕವಾದ ಧ್ವಜವನ್ನು ಹೊಂದಲು ಕಾನೂನಿನಲ್ಲಿ ಅವಕಾಶವಿಲ್ಲ. ಅದರಂತೆ ನಿರ್ಬಂಧ ಕೂಡ ಇಲ್ಲ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...